ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ

Kannada, Reality, Show

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ
1 / 1

1. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ

 ದೊಡ್ಮನೆ ಆಟಕ್ಕೆ ಕಾಲಿಡುತ್ತಾರಾ ರಾಜೇಶ್‌ ಧ್ರುವ- ನಟ ಪ್ರತಿಕ್ರಿಯೆ

ಯಾರೆಲ್ಲಾ ಸೆಲೆಬ್ರಿಟಿಗಳು ಈ ಬಾರಿ ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ. ಹೀಗಿರುವಾಗ ‘ಅಗ್ನಿಸಾಕ್ಷಿ’  ಖ್ಯಾತಿಯ ರಾಜೇಶ್ ಧ್ರುವ , ದೊಡ್ಮನೆಗೆ ಕಾಲಿಡುವ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ರಾಜೇಶ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್‌ಗೆ ಬರಲಿರುವ ಅಂದಾಜಿಸಲ್ಪಟ್ಟ ಸ್ಪರ್ಧಿಗಳ ಪಟ್ಟಿಯಲ್ಲಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾ ತುಂಬಾ ಜನ ವಿಶ್ ತಿಳಿಸುತ್ತಾ ಇದ್ದೀರಿ, ಆದರೆ ನಾನು ಬಿಗ್ ಬಾಸ್‌ ಶೋಗೆ ಹೋಗುತ್ತಿಲ್ಲ. ಅದಕ್ಕೆ ಕಾರಣ ಕಿರುತೆರೆಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಸಕ್ರಿಯ ಆಗಿದ್ದೀನಿ, ಉಳಿದೆಲ್ಲ ಮಾಹಿತಿ ಶೀಘ್ರದಲ್ಲಿ ತಿಳಿಸುವೆ. ನಿಮ್ಮ ಹಾರೈಕೆ- ಪ್ರೀತಿ ಸದಾ ನನ್ನ ಜೊತೆಯಿರಲಿ, ಧನ್ಯೋಸ್ಮಿ ಎಂದು ರಾಜೇಶ್ ಧ್ರುವ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ.