Asia Cup: ಅಫ್ಗಾನಿಸ್ತಾನ ವಿರುದ್ಧ ಶ್ರೀಲಂಕಾಗೆ ಎರಡು ರನ್ ಅಂತರದ ಜಯ

cricket

Asia Cup: ಅಫ್ಗಾನಿಸ್ತಾನ ವಿರುದ್ಧ ಶ್ರೀಲಂಕಾಗೆ ಎರಡು ರನ್ ಅಂತರದ ಜಯ

ಲಾಹೋರ್ : ಅಫ್ಗಾನಿಸ್ತಾನ ವಿರುದ್ಧ ನಡೆದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡವು ಎರಡು ರನ್ ಅಂತರದ ರೋಚಕ ಗೆಲುವು ಸಾ ಧಿಸಿತು.

ಗಡಾಫಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 291 ರನ್‌ ಗಳಿಸಿತು. ಈ ಗುರಿ ಬೆನ್ನತ್ತಿದ ಅ‌ಫ್ಗಾನಿಸ್ತಾನ  37.4 ಓವರ್‌ಗಳಲ್ಲೇ 289 ರನ್‌ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ ಅಲ್ಪ ಅಂತರದ ಸೋಲು ಅನುಭವಿಸಬೇಕಾಯಿತು. ಲಂಕಾ ಪಡೆ ಈ ಗೆಲುವಿನೊಂದಿಗೆ ಟೂರ್ನಿಯ 'ಸೂಪರ್‌ 4' ಘಟದಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.