ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ- ನಾಳೆ ರಾತ್ರಿಯಿಂದ ನುಳ್ಳಿಪ್ಪಾಡಿ ಸಂಚಾರ ಬಂದ್‌,

Kasaragod, National Highway Road Work,

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ- ನಾಳೆ ರಾತ್ರಿಯಿಂದ ನುಳ್ಳಿಪ್ಪಾಡಿ ಸಂಚಾರ ಬಂದ್‌,
1 / 1

1. ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ- ನಾಳೆ ರಾತ್ರಿಯಿಂದ ನುಳ್ಳಿಪ್ಪಾಡಿ ಸಂಚಾರ ಬಂದ್‌,

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನಲೆಯಲ್ಲಿ ನುಳ್ಳಿಪ್ಪಾಡಿ ಯಿಂದ ಕಾಸರಗೋಡು ಹೊಸಬಸ್ಸು ನಿಲ್ದಾಣ ತನಕ ರಾಷ್ಟೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿಯಿಂದ ಸಂಚಾರ ನಿರ್ಬಂಧಿಸಲಾಗಿದೆ. 17 ರಾತ್ರಿ 9 ಗಂಟೆಯಿಂದ 18 ರ ಬೆಳಿಗ್ಗೆ 7. 30ರ ತನಕ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚಾರ ಬಂದ್ ಮಾಡಲಾಗುವುದು ಎಂದು ಊರಂಗಲ್ ಸೊಸೈಟಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ . ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.ಮಂಗಳೂರು , ಕಾಞ೦ಗಾಡ್ ದಾರಿಯಾಗಿ ಸಂಚರಿಸುವ ವಾಹನಗಳು ಕೆ ಎಸ್ ಟಿ ಪಿ ರಸ್ತೆ ಮೂಲಕ ಕಾಸರಗೋಡು ನಗರ ಹಾಗೂ ಚೆಂಗಳ ನಡುವಿನ ವಾಹನಗಳು ಮಧೂರು ರಸ್ತೆ , ಚೌಕಿ , ಉಳಿಯತ್ತಡ್ಕ ಮೂಲಕ ಸಂಚರಿಸುವಂತೆ ತಿಳಿಸಲಾಗಿದೆ.