ಅಯೋಧ್ಯೆ ಶ್ರೀ ರಾಮ ಮಂದಿರ ದೇಗುಲದ ಲೈಟಿಂಗ್ ಹೊಣೆ ಕನ್ನಡಿಗ ರಾಜೇಶ್ ಶೆಟ್ಟಿಗೆ,

Ayodhya,Rama Mandira,

ಅಯೋಧ್ಯೆ ಶ್ರೀ ರಾಮ ಮಂದಿರ ದೇಗುಲದ ಲೈಟಿಂಗ್ ಹೊಣೆ ಕನ್ನಡಿಗ ರಾಜೇಶ್ ಶೆಟ್ಟಿಗೆ,
1 / 1

1. ಅಯೋಧ್ಯೆ ಶ್ರೀ ರಾಮ ಮಂದಿರ ದೇಗುಲದ ಲೈಟಿಂಗ್ ಹೊಣೆ ಕನ್ನಡಿಗ ರಾಜೇಶ್ ಶೆಟ್ಟಿಗೆ,

ಇದೊಂದು ಬಯಸದೇ ಬಂದ ಭಾಗ್ಯ, ವೃತ್ತಿ ಮಾತ್ರವಲ್ಲ ಜೀವನದ ಅವಿಸ್ಮರಣೀಯ ಕ್ಷಣ. ತುಳು ನಾಡಿನ ಕಟೀಲು ಅಮ್ಮನ ಕೃಪೆ, ಮಂತ್ರಾಲಯದ ಗುರುಗಳ ಆಶೀರ್ವಾದ ಎಂದರು. ಉದ್ಯಮಿ ರಾಜೇಶ್ ಶೆಟ್ಟಿ. ಇವರು ಕರಾವಳಿ ಕರ್ನಾಟಕದ ದ.ಕ. ಜಿಲ್ಲೆಯ ಮೂಡಬಿದಿರೆಯವರು. ಬದುಕು ಕಟ್ಟಿಕೊಳ್ಳುವ ಸವಾಲಿನ ನಡುವೆ ಬೆಂಗಳೂರಿನಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತಿದ್ದ ಆರ್. ರಾಜೇಶ್ ಶೆಟ್ಟಿ ಇಂದು ಉದ್ದಗಲ ವ್ಯಾಪಿಸಿರುವ ಪ್ರತಿಷ್ಟಿತ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿ ಆಗಿದ್ದಾರೆ..ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ಐತಿಹಾಸಿಕ ಅಯೋಧ್ಯೆಯ ಶ್ರೀ ರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಹೊಣೆ ಅವರ ಬಳಗಕ್ಕೆ ಲಭಿಸಿದೆ.