ಕರ್ನಾಟಕದಲ್ಲೂ ಸಂಚಲನ ಮೂಡಿಸಿದ ಬಿಹಾರ ಜಾತಿ ಜನಗಣತಿ ವರದಿ ಬಿಡುಗಡೆ

Karnatakadallu Jaathi Janaganathi Varadi Bidugade

1.

ಬಿಹಾರ ಜಾತಿ ಜನಗಣತಿ ವರದಿ ಬಹಿರಂಗ ಬೆನಲ್ಲೇ ಕರ್ನಾಟಕದಲ್ಲೂ ಜಾತಿ ಗಣತಿ ಬಿಡುಗಡೆಗೆ ಕೂಗು

ಬಿಹಾರದಲ್ಲಿ ಆರ್​ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಜಾತಿಗಣತಿಯ ವರದಿಯನ್ನು ಸಹ ಬಿಡುಗಡೆ ಮಾಡಿವಂತೆ ಕೂಗು ಕೇಳಿಬಂದಿದೆ.

ಬಿಹಾರ ಜಾತಿ ಗಣತಿ ಸಮೀಕ್ಷೆಯ ವರದಿಯನ್ನ ಬಹಿರಂಗ ಪಡಿಸಿದೆ. ಆರ್​ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಬಿಹಾರದ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿರುವುದು ದೇಶದಲ್ಲೇ ಇದು ಮೊದಲು. ಲೋಕಸಭೆ ಚುನಾವಣೆ ಹೊತ್ತಲ್ಲಿ ಇದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕದ ಜಾತಿಗಣತಿಯ ವರದಿಯನ್ನುಸಹ ಬಿಡುಗಡೆ ಮಾಡಿವಂತೆ ಕೂಗು ಕೇಳಿಬಂದಿದೆ.