ಬಿಡುಗಡೆ ಆಯ್ತು ‘ತೋತಾಪುರಿ 2’ ಟ್ರೇಲರ್

ಗಣೇಶ ಚತುರ್ಥಿ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಇದರ ಜೊತೆಗೆ ಸಿನಿಮಾ ತಂಡದಿಂದ ಪೋಸ್ಟರ್​​ಗಳು, ಟೀಸರ್ ಬಿಡುಗಡೆ ಮಾಡುವ ಕೆಲಸವೂ ಆಗುತ್ತಿದೆ. ‘ತೋತಾಪುರಿ 2’ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದೆ. ಜಗ್ಗೇಶ್ (Jaggesh), ಧನಂಜಯ್, ಅದಿತಿ ಪ್ರಭುದೇವ (Aditi Prabhudeva) ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ. ‘ತೋತಾಪುರಿ’ ಚಿತ್ರದ ಮುಂದುವರಿದ ಭಾಗವಾಗಿ ‘ತೋತಾಪುರಿ 2’ ಸಿನಿಮಾ ಮೂಡಿ ಬಂದಿದೆ.