ವಿಶ್ವದಲ್ಲೇ ಅತ್ಯಂತ ಉತ್ತಮ ಆಟಗಾರ; ವಿರಾಟ್‍ಕೊಹ್ಲಿ,

India,Cricket,Match

ವಿಶ್ವದಲ್ಲೇ ಅತ್ಯಂತ ಉತ್ತಮ ಆಟಗಾರ; ವಿರಾಟ್‍ಕೊಹ್ಲಿ,
1 / 1

1. ವಿಶ್ವದಲ್ಲೇ ಅತ್ಯಂತ ಉತ್ತಮ ಆಟಗಾರ; ವಿರಾಟ್‍ಕೊಹ್ಲಿ,

ಇಡೀ ವಿಶ್ವದಲ್ಲೇ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಆಫ್ಘಾನಿಸ್ತಾನ ತಂಡದ ನಾಯಕ ಶಹಿಡಿ ಅವರು ಗುಣಗಾಣ ಮಾಡಿದ್ದಾರೆ.

 ನವದೆಹಲಿಯ ಅರುಣ್‍ಜೇಟ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜನಕರಾದ ವಿರಾಟ್ ಕೊಹ್ಲಿಇಂಗ್ಲೆಂಡ್ ವಿರುದ್ಧ 69 ರನ್‍ಗಳ ಐತಿಹಾಸಿಕ ಗೆಲುವು ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಫ್ಘಾನಿಸ್ತಾನ ತಂಡದ ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕನ ಬ್ಯಾಟಿಂಗ್ ಕೌಶಲ್ಯವನ್ನು ಕೊಂಡಾಡಿದ್ದಾರೆ. ಕಿಂಗ್ ಕೊಹ್ಲಿ 47 ಶತಕ ಬಾರಿಸಿದ್ದಾರೆ  ಎಂದು ಹೇಳುವುದು ಸುಲಭ. ಆದರೆ ಅವರು ಈ ಸಾಧನೆ ಮಾಡಲು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ’ ಎಂದು ಶಹಿಡಿ ಹೇಳಿದ್ದಾರೆ.

ಆಫ್ಘಾನಿಸ್ತಾನದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕೇವಲ ಅವರ ಆಟದಿಂದ ಮಾತ್ರ ಗುಣಗಾಣ ಮಾಡಿಲ್ಲ , ವಿಶ್ವದೆಲ್ಲೆಡೆ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೂ ಅವರು ತಮ್ಮ ಹಾಗೂ ಇತರ ತಂಡಗಳ ಆಟಗಾರರಲ್ಲಿ ಸೂರ್ತಿ ತುಂಬಿದ್ದಾರೆ. ಕ್ರಿಕೆಟ್ ಎಂಬುದು ಕೇವಲ ಆಟವಾಗಿ ಉಳಿಯದೆ ಗಡಿ, ಸಂಸ್ಕøತಿ, ಭಾಷೆಯನ್ನು ಮೀರಿ ನಿಂತಿದೆ ಎಂದು ಅವರು ಹೇಳಿದರು.