15ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಸಿಎಂ: ಹೆಚ್ಚಾದ ಜನರ ನಿರೀಕ್ಷೆ,

Bangalore Bajet Sender CM,

15ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಸಿಎಂ: ಹೆಚ್ಚಾದ ಜನರ ನಿರೀಕ್ಷೆ,
1 / 1

1. 15ನೇ ಬಾರಿಗೆ ಬಜೆಟ್‌ ಮಂಡಿಸಲಿರುವ ಸಿಎಂ: ಹೆಚ್ಚಾದ ಜನರ ನಿರೀಕ್ಷೆ,

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 2024-25ನೇ ಸಾಲಿನ ಬಜೆಟ್‌ ಮಂಡಿಸಲಿದ್ದು, ತಮ್ಮ 15ನೇ ಆಯವ್ಯಯವನ್ನು ಮಂಡಿಸುವ ಮುಖೇನ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಬೆಳಗ್ಗೆ 10:15ಕ್ಕೆ ಬಜೆಟ್‌ ಮಂಡಿಸಲಿದ್ದು ಬಜೆಟ್‌ ಗಾತ್ರ 3.75 ಲಕ್ಷ ಕೋಟಿ ರೂ.ಗಳಿಂದ 3.80 ಲಕ್ಷ ಕೋಟಿ ರೂ. ವರೆಗೆ ಇರಲಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್ ಘೋಷಿಸಲು ಮುಂದಾಗಿರುವ ಸಿಎಂ, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು
ಎಂಬ ನಿರೀಕ್ಷೆ ಹೆಚ್ಚಿದೆ. ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್‌ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ರೈತರಿಗೆ ಶೂನ್ಯ ಬಡ್ಡಿದರಲ್ಲಿ 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ವರೆಗೆ ಸಾಲ ಸೇರಿ ಸುವರ್ಣ ಸಂಭ್ರಮ ನಿಮಿತ್ತ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.