ಕುಂಟಂಗೇರಡ್ಕ ದಲ್ಲಿ ಹುಚ್ಚು ನಾಯಿ ಕಡಿತ, ಮಹಿಳೆ ಸಹಿತ 8 ಮಂದಿಗೆ ಗಾಯ,
Kumbale,Kuntangeradka,
1. ಕುಂಟಂಗೇರಡ್ಕ ದಲ್ಲಿ ಹುಚ್ಚು ನಾಯಿ ಕಡಿತ, ಮಹಿಳೆ ಸಹಿತ 8 ಮಂದಿಗೆ ಗಾಯ,
ಕುಂಬಳೆ: ಕುಂಟಂಗೇರಡ್ಕ ವೆಲ್ಫರ್ ಸ್ಕೂಲ್ ಸಮೀಪದ ಎಸ್ ಸಿ ಕಾಲೋನಿಯಲ್ಲಿ ಹುಚ್ಚು ಹಿಡಿದ ಬೀದಿನಾಯಿಯ ಕಡಿತದಿಂದ ಮಹಿಳೆ ಸಹಿತ ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂಜೆ ವೇಳೆ ಎಲ್ಲಿಂದಲೋ ಬಂದ ಹುಚ್ಚುನಾಯಿ ಎದುರು ಸಿಕ್ಕಿದವರಿಗೆಲ್ಲ ಕಚ್ಚಿ ಗಾಯಗೊಳಿಸಿದೆ. ಬಳಿಕ ನಾಗರಿಕರು ಸೇರಿ ನಾಯಿಯನ್ನು ಹೊಡೆದು ಕೊಂದು ಹೂತು ಹಾಕಿದ್ದಾರೆ.