ಪಿಕಪ್ ವ್ಯಾನ್‌‌ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಟ - ಇಬ್ಬರ ಬಂಧನ,

Kasaragod, Drug Case 2 Member Arrested,

ಪಿಕಪ್ ವ್ಯಾನ್‌‌ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಟ - ಇಬ್ಬರ ಬಂಧನ,
1 / 1

1. ಪಿಕಪ್ ವ್ಯಾನ್‌‌ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಟ - ಇಬ್ಬರ ಬಂಧನ,

ಕಾಸರಗೋಡು: ಪಿಕಪ್ ವ್ಯಾನ್‌‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾವನ್ನು ಅಬಕಾರಿ ದಳದ ವಿಶೇಷ ತಂಡ ಪೆರ್ಲದಿಂದ ವಶ ವಶಪಡಿಸಿಕೊಂಡಿದ್ದು,ಇಬ್ಬರನ್ನು ಬಂಧಿಸಿದ್ದಾರೆ. ಅಬಕಾರಿ ದಳದ ಸಿಬ್ಬಂದಿ ಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಪಿಕಪ್ ವ್ಯಾನ್ ಅನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 107 ಕಿಲೋ ಗಾಂಜಾ ಪತ್ತೆಯಾಗಿದೆ. ಕುಂಬಳೆ ಶಾಂತಿಪಳ್ಳ ದ ಶಹೀನ್ ರಹೀಂ (36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್ (32) ಬಂಧಿತ ಆರೋಪಿಗಳು. ಇನ್ನು ಯಾರಿಗೂ ಸಂಶಯ ಬಾರದಂತೆ ಬಚ್ಚಿಟ್ಟು ಗಾಂಜಾವನ್ನು ಸಾಗಿಸಲಾಗುತ್ತಿತ್ತುಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಈ ಗಾಂಜಾ ವನ್ನು ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.