ಬಂಟ್ವಾಳ: ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು 66 ವರ್ಷದ ಮಹಿಳೆ ಸಾವು,

Bantwala Bus Acciedent,

ಬಂಟ್ವಾಳ: ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು 66 ವರ್ಷದ ಮಹಿಳೆ ಸಾವು,
1 / 1

1. ಬಂಟ್ವಾಳ: ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು 66 ವರ್ಷದ ಮಹಿಳೆ ಸಾವು,

ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ಮಹಿಳೆ ಸಾವನ್ನಪ್ಪಿದ ಘಟನೆ ಮಾಣಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ನಿನ್ನಿಕಲ್ ನಿವಾಸಿ ರಾಧ(66) ಮೃತ ಮಹಿಳೆ. ಇವರು ಬಸ್‍ನಿಂದ ಹೊರಗೆಸೆಯಲ್ಪಟ್ಟ ದೃಶ್ಯ ಬಸ್ಸಿನಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಬಸ್ ಹತ್ತಿದ್ದರು. ಹೀಗಾಗಿ ರಾಧಾ ಅವರು ಮಹಿಳೆಗೆ ಸೀಟು ಬಿಟ್ಟುಕೊಡಲು ಸೀಟಿನಿಂದ ಎದ್ದಿದ್ದಾರೆ. ಬಳಿಕ ಮುಂದಿನ ಬಾಗಿಲ ಬಳಿ ಬಸ್ಸಿನ ಸರಳು ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಕೈ ಜಾರಿ ರಾಧಾ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಧಾ ಅವರನ್ನು ಆಸ್ಪತ್ರೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ, ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.