ಮಂಗಳೂರು :ಬಾವಿಗೆ ಹಾರಿ ಯುವತಿ ಆತ್ಮಹತ್ಯೆ :

Kaikamba,Manglore,

ಮಂಗಳೂರು :ಬಾವಿಗೆ ಹಾರಿ ಯುವತಿ ಆತ್ಮಹತ್ಯೆ :
1 / 1

1. ಮಂಗಳೂರು :ಬಾವಿಗೆ ಹಾರಿ ಯುವತಿ ಆತ್ಮಹತ್ಯೆ :

ಕೈಕಂಬ :ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಹೊಗೆಪದವಿನ ನಿವಾಸಿ ಶೋಭಾ (40) ಎಂಬವರು ಪಕ್ಕದ ಮನೆಯ ತೋಟದ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶೋಭಾ ಅವಿವಾಹಿತೆಯಾಗಿದ್ದರು. ರವಿವಾರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದ ಶೋಭಾ ಸೋಮವಾರ ಬೆಳಗ್ಗೆ ಮನೆಯವರು ನೋಡುವಾಗ ಇಲ್ಲದ ಕಾರಣ ಹುಡುಕಾಡಿದಾಗ ಪಕ್ಕದ ಮನೆಯ ರಾಮಕೃಷ್ಣ ಭಟ್ ಅವರ ತೋಟದಲ್ಲಿರುವ ಬಾವಿಯಲ್ಲಿ ಶವ ಪತ್ತೇಯಾಗಿತ್ತು. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.