ವಿಟ್ಲ: ಅಡ್ಯನಡ್ಕ ಬ್ಯಾಂಕ್‌ ನಲ್ಲಿ ಕಳ್ಳತನ; ಕೋಟ್ಯಾಂತರ ರೂ. ನಗ- ನಗದು ಕಳವು,

Karnataka Bank robbed in Dakshina Kannada’s Vitla, cash and jewellery stolen from lockers,

ವಿಟ್ಲ: ಅಡ್ಯನಡ್ಕ ಬ್ಯಾಂಕ್‌ ನಲ್ಲಿ ಕಳ್ಳತನ; ಕೋಟ್ಯಾಂತರ ರೂ. ನಗ- ನಗದು ಕಳವು,
1 / 1

1. ವಿಟ್ಲ: ಅಡ್ಯನಡ್ಕ ಬ್ಯಾಂಕ್‌ ನಲ್ಲಿ ಕಳ್ಳತನ; ಕೋಟ್ಯಾಂತರ ರೂ. ನಗ- ನಗದು ಕಳವು,

ಬ್ಯಾಂಕ್ ನೊಳಗೆ ನುಗ್ಗಿದ ಖದೀಮರು ಕೋಟ್ಯಾಂತರ ಮೌಲ್ಯದ ನಗ- ನಗದು ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಡೆದಿದೆ. ಸುಮಾರು 2 -3 ಕೋಟಿ ರೂ. ನಗದು ಮತ್ತು ಬಂಗಾರ ಕಳ್ಳರ ಪಾಲಾಗಿದೆ. ಕೃತ್ಯವು ಫೆ. 7ರ ಬುಧವಾರ ರಾತ್ರಿ 2.30 ರಿಂದ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಕಳ್ಳತನ ನಡೆದಿದ್ದು, ಕಿಟಕಿಗಳನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆನ್ನಲಾಗಿದೆ. ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕ್ ನ ಸುತ್ತಲೂ ಕಾಡು-ಪೊದೆಗಳೆ ಆವರಿಸಿಕೊಂಡಿದೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.