ಬೆಂಗಳೂರಲ್ಲಿ ಸುರಂಗ ರಸ್ತೆ! ಸಂಚಾರ ದಟ್ಟಣೆಗೆ ಸಿಗುತ್ತಾ ಪರಿಹಾರ?

Bengalore, Traffic, Signal

ಬೆಂಗಳೂರಲ್ಲಿ ಸುರಂಗ ರಸ್ತೆ! ಸಂಚಾರ ದಟ್ಟಣೆಗೆ ಸಿಗುತ್ತಾ ಪರಿಹಾರ?
1 / 1

1. ಬೆಂಗಳೂರಲ್ಲಿ ಸುರಂಗ ರಸ್ತೆ! ಸಂಚಾರ ದಟ್ಟಣೆಗೆ ಸಿಗುತ್ತಾ ಪರಿಹಾರ?

ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಣ ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಅತ್ಯಾಧುನಿಕ ತಂತ್ರಜ್ಞಾನಗಳ ಮೊರೆ ಹೋಗೋದಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದರ ಜೊತೆಯಲ್ಲೇ ಬೆಂಗಳೂರು ನಗರದ ಹಲವೆಡೆ ಸುರಂಗ ರಸ್ತೆಗಳನ್ನ ನಿರ್ಮಾಣ ಮಾಡೋದಕ್ಕೂ ರಾಜ್ಯ ಸರ್ಕಾರ ಪ್ಲಾನ್ ಮಾಡ್ತಿದೆ. ನಾಲ್ಕು ಪಥದ ಟನಲ್ ರಸ್ತೆಗಳನ್ನ ನಿರ್ಮಿಸೋದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಟೆಂಡರ್ ಕರೆಯೋಕೆ ನಿರ್ಧಾರ ಮಾಡಿದೆ.

ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಗೆ ಜಪಾನ್ ಟೆಕ್ನಾಲಜಿ!

ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆ ಅತಿ ದೊಡ್ಡ ಸವಾಲು. ಅದರಲ್ಲೂ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಬಿದ್ದರೆ ವಾಹನಗಳು ಮುಂದೆ ಸಾಗೋದಕ್ಕೇ ಸಾಕಷ್ಟು ಸಮಯ ಬೇಕಾಗುತ್ತೆ. ಇನ್ನು ಎಡ ತಿರುವು, ಬಲ ತಿರುವಿಗೆ ಅವಕಾಶ ಸಿಗದೆ ವಾಹನಗಳು ಸಿಗ್ನಲ್‌ ಬಿದ್ದರೂ ಮುಂದಕ್ಕೆ ಸಾಗದಂಥಾ ಸನ್ನಿವೇಶ ನಿರ್ಮಾಣವಾಗುತ್ತೆ. ಜೊತೆಗೆ ಬೆಂಗಳೂರಿನಲ್ಲಿ ವಾಹನಗಳ ಪ್ರಮಾಣ ಕೂಡಾ ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ

ಬೆಂಗಳೂರಿನ 28 ಪ್ರಮುಖ ವೃತ್ತಗಳಲ್ಲಿ ಜಾರಿ!

 ಈ ಯೋಜನೆಯನ್ನು ಇದೀಗ ಜಾರಿಗೆ ತರೋದಕ್ಕೆ ಸರ್ಕಾರ ಮುಂದಾಗಿದೆ. ಬೆಂಗಳೂರು ನಗರದ ಎಲ್ಲಾ ಪ್ರಮುಖ 28 ಟ್ರಾಫಿಕ್ ಸಿಗ್ನಲ್‌ಗಳಿಗ ಇಂಟರ್‌ನೆಟ್ ಸಂಪರ್ಕ ಹಾಗೂ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತೆ. ಇದರ ನೇರ ಸಂಪರ್ಕ ಬೆಂಗಳೂರಿನ ಸಂಚಾರ ಮಾಹಿತಿ ಕೇಂದ್ರಕ್ಕೆ ರವಾನೆ ಆಗುತ್ತೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಕೇಂದ್ರವನ್ನ ಸ್ಥಾಪನೆ ಮಾಡಲಾಗಿದೆ.