ಮಂಜೇಶ್ವರ : ಬೆಂಕಿ ತಗಲಿ 66 ವರ್ಷದ ಮಹಿಳೆ ಸಾವು,

Manjeshwar Burned Old Women,

ಮಂಜೇಶ್ವರ : ಬೆಂಕಿ ತಗಲಿ 66 ವರ್ಷದ ಮಹಿಳೆ ಸಾವು,
1 / 1

1. ಮಂಜೇಶ್ವರ : ಬೆಂಕಿ ತಗಲಿ 66 ವರ್ಷದ ಮಹಿಳೆ ಸಾವು,

ಬೆಂಕಿ ತಗಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ವರ್ಕಾಡಿಯಲ್ಲಿ ನಡೆದಿದೆ. ವರ್ಕಾಡಿ ತೌಡುಗೋಳಿಯ ಆಗ್ನೇಸ್ ಮೊಂತೆರೋ ( 66) ಮೃತಪಟ್ಟವರು. ಮಾರ್ಚ್ 11 ರಂದು ಸಂಜೆ ಮನೆ ಹಿತ್ತಿಲಿನಲ್ಲಿ ಹುಲ್ಲಿಗೆ ತಗಲಿದ್ದ ಬೆಂಕಿಗೆ ಆಗ್ನೇಸ್ ಸಿಲುಕಿದ್ದು , ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.