ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ "ಚಿನ್ನಿ "

Kerala,Shabarimala Yaathra,

ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ "ಚಿನ್ನಿ "
1 / 1

1. ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಮಾಡುತ್ತಿರುವ ಶ್ವಾನ "ಚಿನ್ನಿ "

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಕ್ಕೇರಿ ಸಿದ್ದಾಪುರ ಗ್ರಾಮದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ 9ಮಂದಿ ಅಯ್ಯಪ್ಪ ಭಕ್ತರು ಗುರುಸ್ವಾಮಿಗಳ ನೇತೃತ್ವದಲ್ಲಿ ಈ ಬಾರಿ ಶಬರಿಮಲೆಗೆ ಪಾದಯಾತ್ರೆ ಕೈಗೊಳ್ಳುತಿದ್ದು, ಸುಮಾರು 30ಕಿಲೋ ಮೀ ಸಂಚರಿಸುತ್ತಿರುವ ವೇಳೆ ಗೋಕಕ್ ತಾಲೂಕಿನ ಕಲ್ಲೋಲಿ ಗ್ರಾಮದಲ್ಲಿ ಇವರೊಂದಿಗೆ ಈ ಬೀದಿ ನಾಯಿ ಕೂಡ ಹಿಂಬಾಲಿಸುತ್ತಿರೋದು ಕಂಡು ಬಂದಿದೆ. ಬಳಿಕ 15ಕಿಲೋ ಮೀ ಇವರ ಹಿಂದೇನೆ ಬರುತ್ತೀರೋದನ್ನು ಗಮನಿಸಿದ ತಂಡದ ಭಕ್ತರು ಹಾಲು ಬಿಸ್ಕೆಟ್ ನೀಡಿದರು. ಒಂದಷ್ಟು ದೂರ ಬಂದು ಮರಳುತ್ತೆ ಎಂದುಕೊಂಡ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಮುಂದುವರಿಸಿದರು. ಆದರೆ ಇವರನ್ನೇ ಹಿಂಬಾಲಿಸಿದ ನಾಯಿ ನೂರಾರು ಕಿಲೋ ಮೀ ದಾಟಿದರು ಇವರ ಸಂಘ ಬಿಡಲಿಲ್ಲ. ನವೆಂಬರ್ 1ರಂದು ಮಾಲೆ ಧರಿಸಿ, ಸುಮಾರು 15ದಿನದ ಯಾತ್ರೆಯಲ್ಲಿ 600 ಕಿಲೋ ಮೀ ಸಂಚರಿಸಿ ಇಂದು ಬೆಳಗ್ಗೆ ಮಂಜೇಶ್ವರ ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಲುಪಿದ್ದಾರೆ. ಪಾದಯಾತ್ರೆಯ ವೇಳೆ ಜನರು ಹಾಲು ಬಿಸ್ಕೆಟ್ ನೀಡಿದರು ಅದನ್ನು ಸ್ವೀಕರಿಸುತ್ತಿರಲಿಲ್ಲ ಈ ನಾಯಿ. ಪಾದಯಾತ್ರೆಯ ಭಾಗವಾದ ಈ ನಾಯಿಗೆ "ಚಿನ್ನಿ " ಎಂದು ನಾಮಕರಣ ಮಾಡಿದರು.