ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಆವರಣದಲ್ಲಿ ಜೋಡು ಕೆರೆ ಕಂಬಳ;

Karnataka,Bengaluru,Kambala

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಆವರಣದಲ್ಲಿ ಜೋಡು ಕೆರೆ ಕಂಬಳ;
1 / 1

1. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಆವರಣದಲ್ಲಿ ಜೋಡು ಕೆರೆ ಕಂಬಳ;

ಕರಾವಳಿಯ ಬೆಂಗಳೂರಿನಲ್ಲಿ 15 ರಿಂದ 20 ಲಕ್ಷ ಮಂದಿ ನೆಲೆಸಿದ್ದು,ಎಲ್ಲ ಜಾತಿಗಳ ನಾಗರಿಕರೂ ಕಂಬಳದಲ್ಲಿ ಭಾಗವಹಿಸಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.ನಾಳೆ 

ನಾಳೆ ಉಪ್ಪಿನಂಗಡಿಯಿಂದ ಕೋಣ ಹೊರಟು ಹಾಸನಕ್ಕೆ ತಲುಪುತ್ತದೆ. ಅಲ್ಲಿಂದ ನೇರವಾಗಿ ಮೆರವಣಿಗೆ ರೀತಿಯಲ್ಲಿ ಬೆಂಗಳೂರು ಪ್ಯಾಲೇಸ್ ಮೈದಾನಕ್ಕೆ ಕೋಣಗಳನ್ನು ತರಳಾಗುತ್ತದೆ. 228 ಕೋಣಗಳ ಜೋಡಿ ರಿಜಿಸ್ಟ್ರೇಷನ್ ಆಗಿದ್ದು, 200 ಕೋಣಗಳನ್ನು ಅಂತಿಮಗೊಳಿಸಲಾಗಿದೆ. ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ. ಆಹಾರ, ನೀರಿನ ಬಗ್ಗೆ ಕೋಣಗಳ ಯಜಮಾನರು ಗಮನ ಹರಿಸುತ್ತಾರೆ. ಬೈಹುಲ್ಲು, ನೀರನ್ನು ಊರಿನಿಂದಲೇತರಲಾಗುತ್ತದೆ ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗಬಹುದು. ಹೀಗಾಗಿ ಅಲ್ಲಿಂದಲೇ ನೀರು ತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಬೆಳಗ್ಗೆ 10ಕ್ಕೆ ಬೆಂಗಳೂರಿನಲ್ಲಿ ಅತ್ಯುತ್ತಮ ಕಂಬಳ ಕರೆ ನಿರ್ಮಾಣ ಮಾಡಲಾಗಿದೆ. 180 ಸ್ಟಾಲ್‌ಗಳು ಇರಲಿದೆ. ಕರಾವಳಿ‌ ಭಾಗದ ರುಚಿಕರ ತಿನಿಸುಗಳು ಇರಲಿದೆ. 25 ರ ಬೆಳಗ್ಗೆ 10 ಕ್ಕೆ ಕಂಬಳ ಉದ್ಘಾಟನೆ ಆಗಲಿದೆ. 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಲು ವ್ಯವಸ್ಥೆಯಿದೆ.ಸಿಎಂ, ಡಿಸಿಎಂ ಸೇರಿ ಇತರೆ ಪಕ್ಷದ ಪ್ರಮುಖರು ಕಂಬಳಕ್ಕೆ ಬರಲಿದ್ದಾರೆ. ಕಂಬಳ ವೀಕ್ಷಿಸಲು ಯಾವುದೇ ಶುಲ್ಕ ಇಲ್ಲ. ಆಸಕ್ತರು ಉಚಿತವಾಗಿ ಕಂಬಳ ವೀಕ್ಷಿಸಬಹುದಾಗಿದೆ.