ಎರಡು ಮಕ್ಕಳ ತಾಯಿಯಾದ ಬಳಿಕ ಹಠದಿಂದ ಐಪಿಎಸ್ ಆದ ಎನ್ ಅಂಬಿಕಾ ಅವರ ಯಶೋಗಾಥೆ,

Tamilunadu,Lady IPS Ambika,

ಎರಡು ಮಕ್ಕಳ ತಾಯಿಯಾದ ಬಳಿಕ ಹಠದಿಂದ ಐಪಿಎಸ್ ಆದ ಎನ್ ಅಂಬಿಕಾ ಅವರ ಯಶೋಗಾಥೆ,
1 / 1

1. ಎರಡು ಮಕ್ಕಳ ತಾಯಿಯಾದ ಬಳಿಕ ಹಠದಿಂದ ಐಪಿಎಸ್ ಆದ ಎನ್ ಅಂಬಿಕಾ ಅವರ ಯಶೋಗಾಥೆ,

ನಮ್ಮಲ್ಲಿ ಹಲವಾರು ಮಂದಿ ವಿವಿಧ ಕಾರಣಗಳಿಗಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಮ್ಮ ಜೀವನ ಇಲ್ಲಿಗೆ ಮುಗಿಯಿತು ಅಂದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಿಗೆ ಇವತ್ತು ನಾವು ಹೇಳೋ ಈ ಮಹಿಳಾ ಸಾಧಕಿಯೊಬ್ಬರು ಮಾದರಿಯಾಗಿ ನಿಲ್ಲುತ್ತಾರೆ. ತನ್ನಿಂದ ಆಗಲ್ಲ ಅನ್ನುವವರಿಗೆ ಆಗುತ್ತೆ ಪ್ರಯತ್ನಿಸಿ ನೋಡು ಅನ್ನುವವರಿಗೆ ಪ್ರೇರಣೆಯ ಸಾಧಕಿ  ಎನ್ ಅಂಬಿಕಾ. ಮನೆಯಲ್ಲಿ ಬಡತನದ ಕಾರಣದಿಂದ ಹತ್ತನೇ ತರಗತಿ ಪಾಸಾಗದ ಈಕೆಯನ್ನು 14 ನೇ ವಯಸ್ಸಿಗೆ ಮನೆಯವರು ತಮಿಳುನಾಡಿನ ದಿಂಡಿಗಲ್ ನಲ್ಲಿ ಕಾನ್ಸ್ಟೇಬಲ್ ಒಬ್ಬರಿಗೆ ಮದುವೆ ಮಾಡಿ ಕೊಡ್ತಾರೆ. ಜೀವನ ಹೀಗೆ ಮುಂದಕ್ಕೆ ಸಾಗುತ್ತಿರಬೇಕಾದ್ರೆ ವಯಸ್ಸು 18 ಆಗುವುದರೊಳಗೆ ಐಗನ್ ಮತ್ತು ನಿಹಾರಿಕಾ ಎಂಬ ಎರಡೂ ಮಕ್ಕಳ ತಾಯಿ ಆಗುತ್ತಾರೆ ಅಂಬಿಕಾ. ತಾನೂ ಕೂಡ ಉನ್ನತ ಅಧಿಕಾರಿ ಆಗಬೇಕು ಅಂತ ತನ್ನ ಗಂಡನ ಬಳಿ ಚರ್ಚೆ ಮಾಡ್ತಾಳೆ. ಒಂದಲ್ಲ, ಎರಡಲ್ಲ ನಾಲ್ಕನೇ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೇನ್ಸ್, ಇಂಟರ್ವ್ಯೂನಲ್ಲಿ ಪಾಸ್ ಆಗಿ "ಎನ್ ಅಂಬಿಕಾ ಐಪಿಎಸ್ ಆಗ್ತಾಳೆ. ಅಂಬಿಕಾ ಈಗ ಮುಂಬಯಿ ನಾರ್ಥ 4 ಜೋನ್ ನಲ್ಲಿ ಡಿಸಿಪಿ ಹಲವಾರು ಕಷ್ಟಕರವಾದ ಕೇಸನ್ನು ಸುಲಭವಾಗಿ ಪರಿಹಾರ ಮಾಡುತ್ತಾಳೆ. ಇದಕ್ಕೆ ಆಕೆಗೆ 2019ಕ್ಕೆ ಲೋಕಮತ್ ಅಂತ ಗೌರವ ನೀಡಲಾಗಿದೆ. ಅಷ್ಟು ಮಾತ್ರವಲ್ಲ ಡಿಪಾಟ್ಮೆಂಟ್ ನಲ್ಲಿ ಲೇಡಿ ಸಿಂಗಮ್ ಅನ್ನುವ ಬಿರುದು ಕೂಡ ಪಡಿತಾಳೆ. ಹೀಗಾಗಿ ನಾವುಗಳು ಹಠ ಅನ್ನುವುದನ್ನು ಕೆಟ್ಟ ಕೆಲಸಗಳಿಗೆ ಉಪಯೋಗ ಮಾಡದೇ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದ್ರೆ ಎಷ್ಟೋ ಪ್ರಯೋಜನಕಾರಿಯಾಗುತ್ತದೆ ಅನ್ನುವುದನ್ನು ಈಕೆಯನ್ನು ನೋಡಿ ಕಲಿಯಬೇಕಾಗಿದೆ.