ತಂದೆಯ ಕೈಯಿಂದ ಜಾರಿ ಬಿದ್ದ ಬಾಲಕಿ; ರಥದ ಚಕ್ರದಡಿ ಸಿಲುಕಿ ಸಾವು,

Kasaragod, Kerala Kollam 5years Baby Death,

ತಂದೆಯ ಕೈಯಿಂದ ಜಾರಿ ಬಿದ್ದ ಬಾಲಕಿ; ರಥದ ಚಕ್ರದಡಿ ಸಿಲುಕಿ ಸಾವು,
1 / 1

1. ತಂದೆಯ ಕೈಯಿಂದ ಜಾರಿ ಬಿದ್ದ ಬಾಲಕಿ; ರಥದ ಚಕ್ರದಡಿ ಸಿಲುಕಿ ಸಾವು,

ಕೇರಳ; ಕೊಲ್ಲಂ, ಜಾತ್ರೆಯಲ್ಲಿ ತಂದೆಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದ ಬಾಲಕಿ ರಥದ ಚಕ್ರದಡಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೇರಳದ ಕೊಲ್ಲಂನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಚವರ ಮೂಲದ ರಮೇಶನ್ ಹಾಗೂ ಜೀಜಿ ದಂಪತಿಯ ಪುತ್ರಿ ಕ್ಷೇತ್ರ(5) ಮೃತಪಟ್ಟ ಬಾಲಕಿ. ಅಪ್ಪ ಅಮ್ಮನೊಂದಿಗೆ ಕೊಟ್ಟಂಕುಳಂಗರ ದೇವಸ್ಥಾನದ ಜಾತ್ರೆಗೆ ಬಂದಿದ್ದ ಕ್ಷೇತ್ರ ರಥ ಎಳೆಯುವ ಸಂದರ್ಭ ಜನರ ನೂಕುನುಗ್ಗಲು ಹೆಚ್ಚಾಗಿ ಅಪ್ಪನ ಕೈಯಿಂದ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದ ಪರಿಣಾಮ ರಥದ ಚಕ್ರ  ಬಾಲಕಿಯ ಮೇಲೆ  ಹರಿದು ಸಾವನ್ನಪ್ಪಿದ್ದಾಳೆ. ಬಾಲಕಿಯ ಮೇಲೆ ಚಕ್ರ ಹರಿದ ಬಳಿಕ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.