ಅಯೋಧ್ಯೆಯಿಂದ ಕಾಫಿನಾಡಿಗೆ ಬಂತು ಶ್ರೀರಾಮನ ಮಂತ್ರಾಕ್ಷತೆ;

Chikmanglore, Ayodhya Mantrakshathe,

ಅಯೋಧ್ಯೆಯಿಂದ ಕಾಫಿನಾಡಿಗೆ ಬಂತು ಶ್ರೀರಾಮನ ಮಂತ್ರಾಕ್ಷತೆ;
1 / 1

1. ಅಯೋಧ್ಯೆಯಿಂದ ಕಾಫಿನಾಡಿಗೆ ಬಂತು ಶ್ರೀರಾಮನ ಮಂತ್ರಾಕ್ಷತೆ;

ಚಿಕ್ಕಮಗಳೂರು: ಮುಂದಿನ ವರ್ಷ ನಡೆಯಲಿರುವ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಕಾಫಿನಾಡಿಗೆ ಶ್ರೀರಾಮ  ಮಂತ್ರಾಕ್ಷತೆ ಆಗಮಿಸಿತು. ಇದನ್ನು ರಾಮ ಭಕ್ತರು ಭಾರೀ ಹರ್ಷೋದ್ಘಾರದ ಮೂಲಕ ಸ್ವಾಗತಿಸಿದರು. ಚಿಕ್ಕಮಗಳೂರಿನಲ್ಲಿ ರಾಮ ಮಂತ್ರಾಕ್ಷತೆಯನ್ನು ವಿಶ್ವ ಹಿಂದೂ ಪರಿಷತ್‌ “ಜೈ ಶ್ರೀರಾಮ್”‌ ಘೋಷಣೆ ಮೊಳಗಿಸುತ್ತಾ ಸ್ವಾಗತಿಸಿತು. ಬಳಿಕ ಶ್ರೀರಾಮ ಮಂತ್ರಾಕ್ಷತೆಗೆ  ವಿಶೇಷ ಪೂಜೆ ಪುನಸ್ಕಾರ ನಡೆಸಲಾಯಿತು.

ಕಾಫಿನಾಡಿಗೆ ಆಗಮಿಸಿದ ಈ ಮಂತ್ರಾಕ್ಷತೆಗೆ ಒಂದು ತಿಂಗಳ ಕಾಲ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿದೆ. ನಂತರ ಮುಂದಿನ ವರ್ಷದ ಜನವರಿ 2 ರಿಂದ 15ರ ವರೆಗೆ ಪ್ರತಿ ಹಿಂದೂಗಳ ಮನೆಗೆ ಮಂತ್ರಾಕ್ಷತೆಯ ಜೊತೆಗೆ ಪ್ರಭು ಶ್ರೀ ರಾಮನ ಫೋಟೋ ಹಾಗೂ ಆಮಂತ್ರಣ ಪತ್ರವನ್ನು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹಂಚಲಿದ್ದಾರೆ.

2024ರ ಜನವರಿ 22 ರಂದು ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೊಳ್ಳಲಿದೆ.