ಅನುಪಯುಕ್ತ ಬಾಳೆ ದಿಂಡಿನಿಂದ ಕರಕುಶಲ ಉದ್ಯಮ ಚಾಮರಾಜನಗರದ ಯುವತಿಗೆ ಪ್ರಧಾನಿ ಮೋದಿ ಪ್ರಶಂಸೆ;

Chamarajanagara,Manki Baath,

ಅನುಪಯುಕ್ತ ಬಾಳೆ ದಿಂಡಿನಿಂದ ಕರಕುಶಲ ಉದ್ಯಮ ಚಾಮರಾಜನಗರದ ಯುವತಿಗೆ ಪ್ರಧಾನಿ ಮೋದಿ ಪ್ರಶಂಸೆ;
1 / 1

1. ಅನುಪಯುಕ್ತ ಬಾಳೆ ದಿಂಡಿನಿಂದ ಕರಕುಶಲ ಉದ್ಯಮ ಚಾಮರಾಜನಗರದ ಯುವತಿಗೆ ಪ್ರಧಾನಿ ಮೋದಿ ಪ್ರಶಂಸೆ;

ವಿಶೇಷವೆಂದರೆ  ಪ್ರಧಾನಿ ಮೋದಿ ಅವರ ಮನ್‌ಕಿ ಬಾತ್‌ನಿಂದಲೇ ಪ್ರೇರಣೆಗೊಂಡು ಸ್ವ ಉದ್ಯೋಗ ಆರಂಭಿಸಿ ಯಶಸ್ಸು ಕಂಡ ವರ್ಷಾ ಅವರು ಅದೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರ ಪ್ರಶಂಸೆಗೆ ಭಾಜನರಾಗಿದ್ದಾರೆ.

 ಮನ್ ಕಿ ಬಾತ್ ಇದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳು ಆಕಾಶವಾಣಿಯಲ್ಲಿ ನಡೆಸಿಕೊಡುವ ಕಾರ್ಯಕ್ರಮ.  ಸರ್ಕಾರದ ಆಶಯಗಳನ್ನು ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವವರ ಹಾಗೂ ವಿವಿಧ ಕ್ಷೇತ್ರಗಳಲ್ಲಿ  ಬೆಳಕಿಗೆ ಬಾರದಂತೆ ಗಣನೀಯ ಸಾಧನೆ ಮಾಡುತ್ತಿರುವವರ ವಿವರಗಳನ್ನು ತಿಳಿಸಿ ಬೆನ್ನುತಟ್ಟುತ್ತಿರುವ  ಕಾರ್ಯವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ.ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್, ಉಪ್ಪಿನಕಾಯಿಯನ್ನು  ತಯಾರಿಸುತ್ತಾ,ಕಸದಿಂದ ರಸ ತೆಗೆಯುವುದರಲ್ಲಿ  ಯಶಸ್ವಿಯಾಗಿದ್ದಾರೆ . ತಾವು ತಯಾರಿಸುವ ಬಾಳೆದಿಂಡಿನ ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‌ಕಾರ್ಟ್, ಅಮೇಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.