ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ; ಕರಾವಳಿ ಕರ್ನಾಟಕದ ಪ್ರಮುಖ ಆಕರ್ಷಣೆ, ಇದರ ವಿಶೇಷತೆ,

Navarathri,Festival,Karnataka

ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ; ಕರಾವಳಿ ಕರ್ನಾಟಕದ ಪ್ರಮುಖ ಆಕರ್ಷಣೆ, ಇದರ ವಿಶೇಷತೆ,
1 / 1

1. ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ; ಕರಾವಳಿ ಕರ್ನಾಟಕದ ಪ್ರಮುಖ ಆಕರ್ಷಣೆ, ಇದರ ವಿಶೇಷತೆ,

ನವರಾತ್ರಿ ಹಬ್ಬ ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬವನ್ನು ವಿವಿಧ ಕಡೆ ವಿವಿಧ ಸಂಪ್ರದಾಯಗಳ ಪ್ರಕಾರ ಆಚರಿಸಲಾಗುತ್ತದೆ. 

 ಅದೇ ರೀತಿ ಕರಾವಳಿ ಕರ್ನಾಟಕ  ಅಂದರೆ ತುಳುನಾಡಿನಲ್ಲಿ ಕೂಡಾ ಬಹಳ ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿನ ದಸರಾದ ಪ್ರಮುಖ ಆಕರ್ಷಣೆಯೆಂದರೆ ಪಿಲಿ ನಲಿಕೆ (ಹುಲಿ ಕುಣಿತ). ತುಳುನಾಡಿನ ಸಾಂಪ್ರದಾಯಿಕ ನೃತ್ಯ. ವಿಶೇಷವಾಗಿ ಕೃಷ್ಣಜನ್ಮಾಷ್ಟಮಿ, ಗಣೇಶೋತ್ಸವ ಮತ್ತು ನವರಾತ್ರಿ  ಹಬ್ಬದ ಸಂದರ್ಭದಲ್ಲಿ ಹುಲಿವೇಷವನ್ನು ಪ್ರದರ್ಶಿಸಲಾಗುತ್ತದೆ. ನವರಾತ್ರಿ ಹಬ್ಬ ಎಂದರೆ  ದುರ್ಗಾದೇವಿಯ ಹಬ್ಬ. ಈ ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ವಾಹನ ಸಿಂಹ ಅಥವಾ ಹುಲಿ. ಆದ್ದರಿಂದ ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುವ ಜಗನ್ಮಾತೆ ದುರ್ಗಾದೇವಿಗೆ ಗೌರವವನ್ನು ಸಲ್ಲಿಸಲು ಹುಲಿವೇಷವನ್ನು ಧರಿಸಲಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಎಲ್ಲರೂ  ಹುಲಿವೇಷವನ್ನು ಧರಿಸುತ್ತಾರೆ.