ಕಾಸರಗೋಡು: ಬೈಕ್ ಅಪಘಾತ: ಪತ್ನಿ ಸಾವು, ಪತಿ-ಪುತ್ರಿಗೆ ಗಂಭೀರ ಗಾಯ,

Kasaragod,Bike Acciedent,

ಕಾಸರಗೋಡು: ಬೈಕ್ ಅಪಘಾತ: ಪತ್ನಿ ಸಾವು, ಪತಿ-ಪುತ್ರಿಗೆ ಗಂಭೀರ ಗಾಯ,
1 / 1

1. ಕಾಸರಗೋಡು: ಬೈಕ್ ಅಪಘಾತ: ಪತ್ನಿ ಸಾವು, ಪತಿ-ಪುತ್ರಿಗೆ ಗಂಭೀರ ಗಾಯ,

ಬೈಕ್ ಮಗುಚಿ ಗೃಹಿಣಿ ಮೃತ ಪಟ್ಟು ಪತಿ ಹಾಗೂ ಪುತ್ರಿ ಗಾಯ ಗೊಂಡ ಘಟನೆ ಬದಿಯಡ್ಕ ಉಬ್ರಂಗಳ ದಲ್ಲಿ ನಡೆದಿದೆ. ಮಾವಿನಕಟ್ಟೆ ಯ ಅನೂಷ (25) ಮೃತಪಟ್ಟವರು. ಪತಿ ದಿನೇಶ್ ಮತ್ತು ಎರಡು ವರ್ಷದ ಪುತ್ರಿ ಶಿವನ್ಯಾ ಗಂಭೀರ ಗಾಯ ಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಬುಧವಾರ ರಾತ್ರಿ ಅಪಘಾತ ನಡೆದಿದೆ. ಉಬ್ರಂಗಳ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ 10 ಅಡಿಯಷ್ಟು ಆಳದ ಹೊಂಡ ಕ್ಕೆ ಬಿದ್ದಿದ್ದು, ಬೊಬ್ಬೆ ಕೇಳಿ ದಾವಿಸಿ ಬಂದ ಸ್ಥಳೀಯರು ಮೂವರನ್ನು ಮೇಲಕ್ಕೆತ್ತಿ ಬದಿಯಡ್ಕದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅನೂಷ ಮೃತ ಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ನೀಡಲಾಯಿತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ