ಕಾಸರಗೋಡು: ರಸ್ತೆ ಬದಿಯಲ್ಲಿ ಪಂಚಾಯತ್ ಸದಸ್ಯೆಯ ಮೃತದೇಹ ಪತ್ತೆ,

Kasaragod, Panchayath member Daied,

ಕಾಸರಗೋಡು: ರಸ್ತೆ ಬದಿಯಲ್ಲಿ ಪಂಚಾಯತ್ ಸದಸ್ಯೆಯ ಮೃತದೇಹ ಪತ್ತೆ,
1 / 1

1. ಕಾಸರಗೋಡು: ರಸ್ತೆ ಬದಿಯಲ್ಲಿ ಪಂಚಾಯತ್ ಸದಸ್ಯೆಯ ಮೃತದೇಹ ಪತ್ತೆ,

ಮೊಗ್ರಾಲ್ ಪುತ್ತೂರು ಪಂಚಾಯತ್ ಮೂರನೇ ವಾರ್ಡ್ ಮುಸ್ಲಿಂ ಲೀಗ್ ಸದಸ್ಯೆ ಪುಷ್ಪಾ( 45) ರಸ್ತೆ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೊಗ್ರಾಲ್ ಪುತ್ತೂರು ಸಮೀಪ ನಡೆದಿದೆ. ಸಂಬಂಧಿಕರ ಮನೆಗೆಂದು ತೆರಳಿದ್ದರು ಎನ್ನಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.ಸೋಮವಾರ ಮಧ್ಯಾಹ್ನ ಪರಿಸರವಾಸಿ ರೋರ್ವರು ಗಮನಿಸಿದ್ದು, ಕೂಡಲೇ ಸ್ಥಳೀಯರ ನೆರವಿನಿಂದ ಆಟೋ ರಿಕ್ಷಾವೊಂದರಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿದ್ದರು.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.