ತಮಿಳುನಾಡಿನಲ್ಲಿ ವನ್ಯಜೀವಿ ಸಂಘರ್ಷ: ಮುಳ್ಳು ಹಂದಿ ಜೊತೆ ಗುದ್ದಾಡಿ ಜೀವ ಬಿಟ್ಟ ಹುಲಿ!

Thamilunadu,Forest,

ತಮಿಳುನಾಡಿನಲ್ಲಿ ವನ್ಯಜೀವಿ ಸಂಘರ್ಷ: ಮುಳ್ಳು ಹಂದಿ ಜೊತೆ ಗುದ್ದಾಡಿ ಜೀವ ಬಿಟ್ಟ ಹುಲಿ!
1 / 1

1. ತಮಿಳುನಾಡಿನಲ್ಲಿ ವನ್ಯಜೀವಿ ಸಂಘರ್ಷ: ಮುಳ್ಳು ಹಂದಿ ಜೊತೆ ಗುದ್ದಾಡಿ ಜೀವ ಬಿಟ್ಟ ಹುಲಿ!

ಇದೊಂದು ಅಪರೂಪದ ಘಟನೆ. ತಮಿಳುನಾಡಿನ ತಿರುಪ್ಪೂರು ಅರಣ್ಯ ವಲಯದ ಅಮರಾವತಿ ವಿಭಾಗದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. 9 ವರ್ಷ ವಯಸ್ಸಿನ ಈ ಗಂಡು ಹುಲಿಯ ಸಾವಿಗೆ ಕಾರಣ ನಿಜಕ್ಕೂ ಅಚ್ಚರಿ ಆಗುವಂಥದ್ದು.. ಯಾಕಂದ್ರೆ, ಮುಳ್ಳು ಹಂದಿಯ ದಾಳಿಯಿಂದಾಗಿ ಈ ಹುಲಿ ಕೊನೆಯುಸಿರೆಳೆದಿದೆ! ಅಮರಾವತಿ ಅರಣ್ಯ ವಿಭಾಗದ ಕುಝುದಕಟ್ಟಿ ಎಂಬಲ್ಲಿ ಹುಲಿಯ ಮೃತ ದೇಹ ಸಿಕ್ಕಿದ್ದು, ಹುಲಿಯ ಮೈ ತುಂಬಾ ಮುಳ್ಳುಗಳು ಹೊಕ್ಕಿವೆ.ಮುಳ್ಳು ಹಂದಿ ಜೊತೆ ಸಂಘರ್ಷ ನಡೆಸಿದ ಬಳಿಕ ಹುಲಿಯ ಮೈ ತುಂಬಾ ಮುಳ್ಳುಗಳು ಚುಚ್ಚಿಕೊಂಡಿದ್ದು, ಈ ಗಾಯದಿಂದಲೇ ಹುಲಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಮಾಹಿತಿ ನೀಡಿದೆ.