ತಾಯಿ ಅಂತ್ಯಸಂಸ್ಕಾರಕ್ಕೂ ಬಾರದ ಮಕ್ಕಳು ಹೀಗೊಂದು ಹೃದಯವಿದ್ರಾವಕ ಘಟನೆ,

Uppinangadi Heart Toucching Story,

ತಾಯಿ ಅಂತ್ಯಸಂಸ್ಕಾರಕ್ಕೂ ಬಾರದ ಮಕ್ಕಳು  ಹೀಗೊಂದು ಹೃದಯವಿದ್ರಾವಕ ಘಟನೆ,
1 / 1

1. ತಾಯಿ ಅಂತ್ಯಸಂಸ್ಕಾರಕ್ಕೂ ಬಾರದ ಮಕ್ಕಳು ಹೀಗೊಂದು ಹೃದಯವಿದ್ರಾವಕ ಘಟನೆ,

ಉಪ್ಪಿನಂಗಡಿ: ಇವರ ಹೆಸರು ಲಕ್ಷ್ಮೀ ಹೆಗ್ಡೆ ಇವರಿಗೆ ಸುಮಾರ 90 ವರ್ಷ, 7 ಮಕ್ಕಳಿದ್ದರು ಇಳಿವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಶ್ರಮ ಸೇರಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದು, ಅಂತ್ಯಸಂಸ್ಕಾರಕ್ಕೂ ಯಾರು ಬಾರದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.ಉಪ್ಪಿನ0ಗಡಿ ಬಳಿಯ ಇಳಂತಿಲದಲ್ಲಿ ಲಕ್ಷ್ಮೀ ಹೆಗ್ಡೆ ಸ್ವಂತ ಮನೆಯನ್ನು ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಇವರು ನ್ಯಾಯ ಬಯಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ಹೆತ್ತಮ್ಮನ ರಕ್ಷಣೆಯ ಕರ್ತವ್ಯ ನಿರ್ವಹಿಸಿ ಎಂದು ಮಕ್ಕಳಿಗೆ ಸೂಚಿಸಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು. ಆ ಬಳಿಕ ಆಗಿನ ಠಾಣಾಧಿಕಾರಿ ನಂದ ಕುಮಾರ್ ಲಕ್ಷ್ಮೀ ಹೆಗ್ಡೆ ಅವರನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರಲ್ಲದೇ ಮಗನ ಸ್ಥಾನದಲ್ಲಿ ನಿಂತು ಆಶ್ರಮಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.ಲಕ್ಷ್ಮೀ ಹೆಗ್ಡೆ ರವಿವಾರ ಹೃದಯಾಘಾತದಿಂದ ನಿಧನ ಹೊಂದಿದ ಬಳಿಕ ಶವದ ಅಂತಿಮ ವಿಧಿ ನೆರವೇರಿಸಲು ಸಂಬ0ಧಿಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎನ್ನಲಾಗಿದೆ. ಆಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರ್ತವ್ಯದ ಕಾರಣಕ್ಕೆ ದೂರದಲ್ಲಿ ಇದ್ದ ಕಾರಣ ಸಕಾಲದಲ್ಲಿ ತಲುಪಲು ಅಸಾಧ್ಯವಾಗಿತ್ತು. 7 ಮಕ್ಕಳಿದ್ದರೂ ಅವರಲ್ಲಿ ಯಾರೂ ಪಾರ್ಥಿವ ಶರೀರದ ಅಂತಿಮ ಕಾರ್ಯಕ್ಕೆ ಆಗಮಿಸದ ಕಾರಣ ಅನಾಥಾಶ್ರದವರೇ ಅಂತ್ಯ ಸಂಸ್ಕಾರವನ್ನು ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಯಿತು.