ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಧಾಳಿ, ತೋಟ, ಕೃಷಿ ನಾಶ,

Sulya,Agriculture,Forest

ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಧಾಳಿ, ತೋಟ, ಕೃಷಿ ನಾಶ,
1 / 1

1. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಧಾಳಿ, ತೋಟ, ಕೃಷಿ ನಾಶ,

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ತೋಟಗಳಿಗೆ ಕಾಡಾನೆ ಧಾಳಿ ನಡೆಸುತಿದೆ. ಕಳೆದ ವಾರ ಇಲ್ಲಿನ ಚಾಕೋಟೆ ಭಾಗದ ತೋಟಗಳಿಗೆ ಕಾಡಾನೆಗಳ ಹಿಂಡು ಎಲ್ಲಾ ಕೃಷಿಗಳನ್ನು ಹಾನಿಮಾಡಿದ್ದು, ಈ ವಾರ ಮೂರು ದಿನಗಳಿಂದ ಚಾಕೋಟೆ, ಬೋಳುಗಲ್ಲು ಭಾಗದಲ್ಲಿ ಕೃಷಿ ಹಾನಿ ಮಾಡಿದೆ.

ಅಲ್ಲಿನ ಜಗದೀಶ್ ಎಂಬವರ ತೋಟದ ತೆಂಗಿನ ಮರ, ಅಡಿಕೆ ಮರ, ಬಾಳೆ ಗಿಡಗಳನ್ನು ಮಗುಚಿ ಹಾನಿ ಉಂಟು ಮಾಡಿ, ನೀರಾವರಿ ಪೈಪ್ ಗಳನ್ನು ಪುಡಿ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.