ಹಮಾಸ್ ಭಯೋತ್ಪಾದಕರಿಂದ ಇಸ್ರೆಲ್ ನ ಅನಾರೋಗ್ಯ ಪೀಡಿತ ದಂಪತಿಯನ್ನು ರಕ್ಷಿಸಿದ 'ಇಂಡಿಯನ್ ಸೂಪರ್ ವುಮನ್'!

Esrel,Hamas,Indian Women,

ಹಮಾಸ್ ಭಯೋತ್ಪಾದಕರಿಂದ ಇಸ್ರೆಲ್ ನ ಅನಾರೋಗ್ಯ ಪೀಡಿತ ದಂಪತಿಯನ್ನು  ರಕ್ಷಿಸಿದ 'ಇಂಡಿಯನ್ ಸೂಪರ್ ವುಮನ್'!
1 / 1

1. ಹಮಾಸ್ ಭಯೋತ್ಪಾದಕರಿಂದ ಇಸ್ರೆಲ್ ನ ಅನಾರೋಗ್ಯ ಪೀಡಿತ ದಂಪತಿಯನ್ನು ರಕ್ಷಿಸಿದ 'ಇಂಡಿಯನ್ ಸೂಪರ್ ವುಮನ್'!

ಇಸ್ರೇಲಿಗಳ ಹಬ್ಬದ ಸಂದರ್ಭದಲ್ಲಿ ನಡೆದ ದಾಳಿಯ ವೇಳೆ ಇಸ್ರೇಲ್ ನ ಅನಾರೋಗ್ಯ ಪೀಡಿತ ದಂಪತಿಗಳ ಕಾಳಜಿ ವಹಿಸಲು ನಿಯುಕ್ತಿಗೊಂಡಿರುವ ಕೇರಳದ ಇಬ್ಬರು ಮಹಿಳೆಯರು ಹಮಾಸ್ ಉಗ್ರರಿಂದ ವೃದ್ಧ ದಂಪತಿಯ ಜೀವ ಉಳಿಸಿ ಮಾನವಿಯತೆ ಮೆರೆದಿದ್ದಾರೆ. 

ಭಾರತದಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಬ್ಬರು ಕೇರಳಿಗರಾದ ಸಬಿತಾ, ಮೀರಾ ಮೋಹನನ್ ಅವರನ್ನು ಭಾರತದ ಸೂಪರ್ ವುಮೆನ್ ಎಂದು ಬಣ್ಣಿಸಿ ಧನ್ಯವಾದ ತಿಳಿದ್ದಾರೆ.

ತಮ್ಮೆಡೆಗೆ ಗುಂಡಿನ ದಾಳಿ ನಡೆಯುತ್ತಿದ್ದರೂ ಈ ಇಬ್ಬರೂ ಮಹಿಳೆಯರು ತಾವಿದ್ದ ಮನೆಯ ಸುರಕ್ಷಾ ಕೊಠಡಿಯ ಬಾಗಿಲ ಹಿಡಿಯನ್ನು ಭದ್ರವಾಗಿ ಹಿಡಿದು ಹಮಾಸ್ ಉಗ್ರರು ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ. ತಾವು ಕಾಳಜಿ ವಹಿಸುತ್ತಿದ್ದ ವೃದ್ಧ ದಂಪತಿಗಳ ಪೈಕಿ ಮಹಿಳೆಗೆ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್ಎಸ್) ಎಂಬ ಆರೋಗ್ಯ ಸಮಸ್ಯೆ ಇತ್ತು ಎಂದು ಸಬಿತಾ ತಿಳಿಸಿದ್ದಾರೆ.

ಈ ಹಂತದಲ್ಲಿ ಸಬಿತಾ ಪುನಃ ವೃದ್ಧ ದಂಪತಿಯ ಮಗಳಿಗೆ ಕರೆ ಮಾಡಿ ಏನು ಮಾಡಬೇಕೆಂದು ಕೇಳಿದ್ದಾರೆ. "ಸುರಕ್ಷಾ ಕೊಠಡಿಯ ಬಾಗಿಲ ಹ್ಯಾಂಡಲ್ ನ್ನು ಭದ್ರವಾಗಿ ಹಿಡಿದುಕೊಂಡು ಒಳಗೆ ಯಾರೂ ಬರದಂತೆ ತಡೆಯಲು ಸೂಚಿಸಿದ್ದಾರೆ. ಅಂತಯೇ ಗುಂಡಿನ ದಾಳಿಗಳ ನಡುವೆಯೂ ಧೃತಿಗೆಡದ ಮಹಿಳೆಯರು ವೃದ್ಧ ದಂಪತಿಯನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. ಈ ಇಬ್ಬರೂ ಕಳೆದ 3 ವರ್ಷಗಳಿಂದ ಇಸ್ರೇಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.