ನೀತಿ ಸಂಹಿತೆ ಉಲ್ಲಂಘನೆ- ಬಿಜೆಪಿ ಸಂಸದೆ ರೀಟಾ ಬಹುಗುಣಗೆ 6 ತಿಂಗಳು ಜೈಲು

Lakhnaw, Reeta Bahugun 6 Month Jail,

ನೀತಿ ಸಂಹಿತೆ ಉಲ್ಲಂಘನೆ- ಬಿಜೆಪಿ ಸಂಸದೆ ರೀಟಾ ಬಹುಗುಣಗೆ 6 ತಿಂಗಳು ಜೈಲು
1 / 1

1. ನೀತಿ ಸಂಹಿತೆ ಉಲ್ಲಂಘನೆ- ಬಿಜೆಪಿ ಸಂಸದೆ ರೀಟಾ ಬಹುಗುಣಗೆ 6 ತಿಂಗಳು ಜೈಲು

ಲಖನೌ; ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆಹಾಗೂ 1,100 ರೂ. ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. 2012ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ರೀಟಾ, ಕಾಂಗ್ರೆಸ್ನಲ್ಲಿದ್ದರು. ಪಕ್ಷದ ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿದ್ದಾಗ ಪ್ರಚಾರದ ಅವಧಿ ಮುಗಿದಿದ್ದರೂ ಸಾರ್ವಜನಿಕ ಸಭೆ ನಡೆಸುವ ಮೂಲಕ ಮಾದರಿ ನೀ ತಿ ಸಂಹಿತೆ ಉಲ್ಲಂಘಿಸಿದ್ದರು ಎಂಬ ಅರೋಪ ಅವರ ಮೇಲೆ ಇತ್ತು.ಸಂಸದರ, ಶಾಸಕರ ನ್ಯಾಯಾಲಯದ ವಿಶೇಷ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇ ಟ್ ಅಂಬರೀಷ್‌ ಕುಮಾರ್ ಶ್ರೀ ವಾಸ್ತವ ಶಿಕ್ಷೆ ಪ್ರಕಟಿಸಿದ್ದಾರೆ.