ಬಂಟ್ವಾಳ: ಲಾರಿ ಹರಿದು ಬೈಕ್ ನ ಸಹ ಸವಾರ ಮೃತ್ಯು;

Batwala Lorry Bike Acciedent;

ಬಂಟ್ವಾಳ: ಲಾರಿ ಹರಿದು ಬೈಕ್ ನ ಸಹ ಸವಾರ ಮೃತ್ಯು;
1 / 1

1. ಬಂಟ್ವಾಳ: ಲಾರಿ ಹರಿದು ಬೈಕ್ ನ ಸಹ ಸವಾರ ಮೃತ್ಯು;

ಓವರ್ ಟೆಕ್ ಮಾಡುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಸಹಸವಾರ ಡಾಮರು ರಸ್ತೆಗೆ ಬಿದ್ದಿದ್ದು, ಆತನ ಮೇಲೆ ಲಾರಿ ಹರಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಶುಕ್ರವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಿ.ಸಿ.ರೋಡ್ ಸರ್ಕಲ್ ಬಳಿ ನಡೆದಿದೆ. ಬೈಕ್ ಸಹಸವಾರ ಬೆಂಗ್ರೆ ನಿವಾಸಿ ರಮೀಜ್ (20) ಎಂದು ಗುರುತಿಸಲಾಗಿದೆ ಡಿಕ್ಕಿ ಹೊಡೆದ ಲಾರಿ ಸಹಿತ ಚಾಲಕ ಪರಾರಿಯಾಗಿದ್ದು, ಬಳಿಕ ಪೊಲೀಸರು ಲಾರಿಯನ್ನು ಪತ್ತೆ ಮಾಡಿದ್ದಾರೆ. ಬೈಕ್ ಸವಾರ ತನ್ನ ಸ್ನೇಹಿತನ ಜೊತೆ ಅಜಿಲಮೊಗರು ಮಸೀದಿಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ತೆರಳುವವರು ಎಂದು ಹೇಳಲಾಗಿದೆ.