ಮಗುವಿಗೆ ನಾಮಕರಣ ಮಾಡಿದ ಕೇರಳ ಹೈಕೋರ್ಟ್!

Kerala, Kocchi,News

ಮಗುವಿಗೆ ನಾಮಕರಣ ಮಾಡಿದ ಕೇರಳ ಹೈಕೋರ್ಟ್!
1 / 1

1. ಮಗುವಿಗೆ ನಾಮಕರಣ ಮಾಡಿದ ಕೇರಳ ಹೈಕೋರ್ಟ್!

ಮಗಳಿಗೆ ಹೆಸರಿಡುವ ವಿಚಾರದಲ್ಲಿ ಪೋಷಕರ ನಡುವೆ ಜಗಳ: ಮಗುವಿಗೆ ನಾಮಕರಣ ಮಾಡಿದ ಕೇರಳ ಹೈಕೋರ್ಟ್!

ಮೂರು ವರ್ಷದ ಮಗಳಿಗೆ ಹೆಸರಿಡುವ ವಿಚಾರದಲ್ಲಿ ಪೋಷಕರ ನಡುವೆ ಜಗಳ ನಡೆದಿದೆ. ಕೊನೆಗೆ ಈ ಪ್ರಕರಣ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ಫೋಷಕರಿಬ್ಬರ ವಾದಪ್ರತಿವಾದವನ್ನು ಆಲಿಸಿದ ಬಳಿಕ ಕೋರ್ಟ್ ಮಗುವಿಗೆ ಹೆಸರನ್ನು ಸೂಚಿಸಿದೆ.

ಈ ವೇಳೆ ಮಗುವಿಗೆ ಹೆಸರಿಡಲು ವಿಳಂಬವಾಗುತ್ತಿರುವುದು ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಮಗು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿಯುತ್ತದೆ. ಪೋಷಕರ ನಡುವಿನ ಜಗಳಕ್ಕಿಂತ ಮಗುವಿನ ಕ್ಷೇಮ ಮುಖ್ಯ ಎಂದು ಕೋರ್ಟ್ ಹೇಳಿದೆ.

ಇದಾದ ನಂತರ ತಾಯಿ ರಿಜಿಸ್ಟ್ರಾರ್ ಕಚೇರಿ ತಲುಪಿದರು. ಅಲ್ಲಿ ಅವರು ಜನನ ಪ್ರಮಾಣಪತ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದರು. ಆ ಹುಡುಗಿಯ ಹೆಸರನ್ನು 'ಪುಣ್ಯ ನಾಯರ್' ಎಂದು ಬರೆಯಲು ಹೇಳಿದರು. ಆದರೆ ಇದಕ್ಕೆ ಪೋಷಕರಿಬ್ಬರ ಉಪಸ್ಥಿತಿ ಅಗತ್ಯ ಎಂದು ರಿಜಿಸ್ಟ್ರಾರ್ ಕಚೇರಿಯಲ್ಲಿ ತಿಳಿಸಲಾಯಿತು. ಆದರೆ ತಂದೆ ಹುಡುಗಿಗೆ 'ಪದ್ಮಾ ನಾಯರ್' ಎಂದು ಹೆಸರಿಡಲು ಬಯಸಿದ್ದರು. ಇಬ್ಬರೂ ತಮ್ಮದೇ ಆದ ಹೆಸರು ಮಗುವಿಗೆ ಇಡಲು ಗಲಾಟೆ ಮಾಡಿಕೊಂಡಿದ್ದಾರೆ

ಹೀಗಾಗಿ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಎರಡೂ ಕಡೆಯವರ ಮಾತನ್ನು ಆಲಿಸಿದ ನ್ಯಾಯಾಲಯ, ಮಗು ತಾಯಿಯೊಂದಿಗೆ ವಾಸಿಸುತ್ತಿದೆ ಎಂದು ಹೇಳಿದಾಗ, ಅಂತಹ ಪರಿಸ್ಥಿತಿಯಲ್ಲಿ ಅವರು ನೀಡಿದ ಹೆಸರಿಗೆ ಪ್ರಾಮುಖ್ಯತೆ ನೀಡಬೇಕು. ಆದರೆ ಈ ಸಮಾಜವು ಪಿತೃಪ್ರಧಾನವಾಗಿದೆ, ಆದ್ದರಿಂದ ತಂದೆಯ ಹೆಸರನ್ನೂ ಸೇರಿಸಬೇಕು. ಹುಡುಗಿಗೆ ಪುಣ್ಯ ಎಂದು ಹೆಸರಿಡಲು ನ್ಯಾಯಾಲಯ ಆದೇಶಿಸಿದೆ, ಆದರೆ ಉಪನಾಮವಾಗಿ ತಂದೆಯ ಹೆಸರನ್ನು ಸೇರಿಸಲು ಸೂಚಿಸಿದೆ.