ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆ

Thiruvananthapura,Kerala

ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆ
1 / 1

1. ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆಯಾದ ಭಯಾನಕ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಏಳು ತಿಂಗಳ ಮಗುವಿನ ಶ್ವಾಸಕೋಶದಲ್ಲಿ ಆಟಿಕೆಗಳಲ್ಲಿ ಬಳಸುವ ಎಲ್‌ಇಡಿ ಬಲ್ಬ್ ಪತ್ತೆಯಾಗಿದ್ದು ವೈದ್ಯರು ಶಾಕ್ ಆಗಿದ್ದಾರೆ.

ಕೆಲ ದಿನಗಳ ಹಿಂದೆ ಪೋಷಕರಿಬ್ಬರು ಮಗುವಿಗೆ ಉಸಿರಾಟದ ತೊಂದರೆಯ ಕಾರಣ ಕೊಟ್ಟಾಯಂನ ಆಸ್ಪತ್ರೆಗೆ ಹೋಗಿದ್ದಾರೆ.

ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ಶ್ವಾಸಕೋಶದಲ್ಲಿ ಏನೋ ಇರುವುದು ಕಂಡು ಬಂದಿದೆ. ಸೂಕ್ಷ್ಮವಾಗಿ ಅದನ್ನು ಗಮನಿಸಿದಾಗ ಅದು ಎಲ್‌ಇಡಿ ಬಲ್ಬ್ ಎಂದು ತಿಳಿದುಬಂದಿದೆ. ತಡಮಾಡದೇ ವೈದ್ಯರು ಮಗುವನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.

ಅಲ್ಲಿ ಬ್ರಾಂಕೋಸ್ಕೋಪಿಕ್ ವಿಧಾನದ ಮೂಲಕ ಇದನ್ನು ಹೊರಗೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.