ಕಾಸರಗೋಡು ನಗರಸಭಾ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಬೀಗಂ ಆಯ್ಕೆ,

Kasaragod Abbas Beegam Selected To Nagarasabha,

ಕಾಸರಗೋಡು ನಗರಸಭಾ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಬೀಗಂ ಆಯ್ಕೆ,
1 / 1

1. ಕಾಸರಗೋಡು ನಗರಸಭಾ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಬೀಗಂ ಆಯ್ಕೆ,

ಕಾಸರಗೋಡು ನಗರಸಭಾ ನೂತನ ಅಧ್ಯಕ್ಷರಾಗಿ ಮುಸ್ಲಿಂ ಲೀಗ್ ನ ಅಬ್ಬಾಸ್ ಬೀಗಂ ಆಯ್ಕೆಯಾಗಿದ್ದಾರೆ. ಗುರುವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಮೇಶ್’ರನ್ನು ಸೋಲಿಸಿದ್ದಾರೆ. ಬೀಗಂ 20 ಹಾಗೂ ರಮೇಶ್ 14 ಮತಗಳನ್ನು ಪಡೆದರು. ಅಧ್ಯಕ್ಷರಾಗಿದ್ದ ಪಿ.ಎಂ ಮುನೀರ್ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು .ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯಂತೆ ಮುನೀರ್ ರಾಜೀನಾಮೆ ನೀಡಿದ್ದರು. ಸಿಪಿಎಂ ನ ಓರ್ವ ಹಾಗೂ ಇಬ್ಬರು ಸ್ವತಂತ್ರ ಸದಸ್ಯರು ಮತದಾನದಿಂದ ದೂರ ಉಳಿದರು. ಖಾಲಿದ್ ಪಚ್ಚೆಕ್ಕಾಡ್ ಅಬ್ಬಾಸ್ ರವರ ಹೆಸರನ್ನು ಸೂಚಿಸಿದರು. ಮುಮ್ಮು ಚಾಲ ಅನುಮೋದಿಸಿದರು. ಚುನಾವಣಾಧಿಕಾರಿ ಯಾಗಿ ಆದಿಲ್ ಮುಹಮ್ಮದ್ ಚುನಾವಣೆ ಯನ್ನು ನಿಯಂತ್ರಿಸಿದರು. ಅಬ್ಬಾಸ್ ಬೀಗಂ ನಗರಸಭೆಯ ಎರಡನೇ ವಾರ್ಡ್ ನಿಂದ ಸದಸ್ಯರಾಗಿ ಆಯ್ಕೆ ಯಾಗಿದ್ದಾರೆ