ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮ ಇಂದಿನಿಂದ,

Kumbale Bambrana Anuval Temple Fest,

ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮ ಇಂದಿನಿಂದ,
1 / 1

1. ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮ ಇಂದಿನಿಂದ,

ಉಪ್ಪಳ : ಕುಂಬಳೆ ಬಳಿಯ ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ವಾರ್ಷಿಕ ನೇಮೋತ್ಸವ [ ಫೆ 6 ಮತ್ತು7] ಇಂದು ಮತ್ತು ನಾಳೆ ನಡೆಯಲಿದೆ. ಇಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಕ್ಕೆ ಭಜನೆ, ದುರ್ಗಾಪೂಜೆ, ರಾತ್ರಿ 8 ಕ್ಕೆ ರಾಹು ಗುಳಿಗ ಬನದಲ್ಲಿ ತಂಬಿಲ,8.20 ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು,9 ಕ್ಕೆ ಸಹ ದೈವಗಳಿಗೆ ಮತ್ತು ಕಲಾಲ್ತ ಗುಳಿಗನ ಕೋಲ, ಅನ್ನಸಂತರ್ಪಣೆ, ನಾಳೆ [ಬುಧವಾರ] ಬೆಳಿಗ್ಗೆ 11 ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಕೊರತಿ ದೈವದ ಕೋಲ, ರಾತ್ರಿ 8ರಿಂದ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಮುಕಾಂಬಿಕ ಗುಳಿಗ, ಕಲ್ಲುರ್ಟಿ ದೈವಗಳಿಗೆ ತಂಬಿಲ, ಅನ್ನಸಂತರ್ಪಣೆ ನಡೆಯಲಿದೆ.