ಯಕ್ಷಧ್ರುವ ಪಟ್ಲ ಫೌಂಢೇಶನ್ ನಿಂದ ಯಕ್ಷ ಕಲಾವಿದನಿಗೆ ನೂತನ ಮನೆ ಹಸ್ತಾಂತರ,

New Home Sponcerd By Yaksha Druva Patla Foundation

ಯಕ್ಷಧ್ರುವ ಪಟ್ಲ ಫೌಂಢೇಶನ್ ನಿಂದ ಯಕ್ಷ ಕಲಾವಿದನಿಗೆ ನೂತನ ಮನೆ ಹಸ್ತಾಂತರ,
1 / 1

1. ಯಕ್ಷಧ್ರುವ ಪಟ್ಲ ಫೌಂಢೇಶನ್ ನಿಂದ ಯಕ್ಷ ಕಲಾವಿದನಿಗೆ ನೂತನ ಮನೆ ಹಸ್ತಾಂತರ,

ಸುಳ್ಯ: ಕರಾವಳಿ ಕರ್ನಾಟಕದ ಕಲಾವಿದರ ಪಾಲಿಗೆ (ಯಕ್ಷಗಾನ / ನಾಟಕ ರಂಗಭೂಮಿ / ದೈವಾರಾದನೆ) ಸಹಕರಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಢೇಶನ್ ಹತ್ತು ಹಲವು ಯೋಜನೆಗಳಲ್ಲಿ ಪಟ್ಲ ಯಕ್ಷಾಶ್ರಯ ಯೋಜನೆಯು ಪ್ರಸ್ತುತ ಯಶಸ್ವಿಯಾಗುತ್ತಿದೆ. ಅದೇ ರೀತಿ ಫೆ.22 ರಂದು ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಸಸಿಹಿತ್ಲು ಭಗವತೀ ಮೇಳದ ಶ್ರೀ ಗುಡ್ಡಪ್ಪ ಸುವರ್ಣರಿಗೆ ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಪಟ್ಲ ಫೌಂಡೇಶನ್ ಮೂಲಕ ನೂತನ ಮನೆಯನ್ನು ನಿರ್ಮಿಸಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಿ ಮನೆಯನ್ನು ಹಸ್ತಾಂತರಿಸಿದರು.ಕೊಡುಗೈ ದಾನಿಗಳು, ಫೌಂಡೇಶನಿನ ಮಹಾದಾನಿಗಳೂ ಆದ ಶಶಿಧರ ಬಿ.ಶೆಟ್ಟಿ ಬರೋಡ ರವರ ಹೆಸರಿನಲ್ಲಿ ಈ ಮನೆಯನ್ನು ನಿರ್ಮಿಸಲಾಗಿರುತ್ತದೆ. ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಸಸಿಹಿತ್ಲು ಮೇಳದ ಯಜಮಾನ ರಾಜೇಶ್ ಗುಜರನ್, ಸುಳ್ಯ ಘಟಕದ ಶ್ರೀನಾಥ್ ರೈ, ಪ್ರೀತಮ್ ರೈ, ಬೆಳ್ಳಾರೆ ರಮೇಶ್ ರೈ, ಪ್ರಶಾಂತ್ ರೈ ಪಂಜ, ಡಾ.ಪ್ರಖ್ಯಾತ ಶೆಟ್ಟಿ ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೂತನ ಮನೆಯ ಕೀಲಿಕೈಯನ್ನು ಶ್ರೀ ಗುಡ್ಡಪ್ಪ ಸುವರ್ಣ ದಂಪತಿಯವರನ್ನು ಗೌರವಿಸಿ ಹಸ್ತಾಂತರಿಸಲಾಯಿತು. ಶ್ರೀ ಗುಡ್ಡಪ್ಪ ಸುವರ್ಣ ದಂಪತಿಯವರು ಮಹಾದಾನಿ ಶಶಿಧರ ಬಿ ಶೆಟ್ಟಿ ಬರೋಡ ಇವರಿಗೆ ಹಾಗೂ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿ, ಪಟ್ಲ ಫೌಂಡೇಶನಿಗೆ ಹಾಗೂ ಸತ್ಕಾರ್ಯಕ್ಕೆ ಸಹಕಾರ ನೀಡುವ ಎಲ್ಲಾ ದಾನಿಗಳಿಗೆ ಶುಭವನ್ನು ಕೋರಿದರು.