ಶಿವಮೊಗ್ಗ: ಉತ್ಸವಕ್ಕೆ ಬಂದ ಆನೆಗೆ ಹೆರಿಗೆ, ಜಂಬೂ ಸವಾರಿ ರದ್ದು!

Shivmogga, Eliphant Birth,

ಶಿವಮೊಗ್ಗ: ಉತ್ಸವಕ್ಕೆ ಬಂದ ಆನೆಗೆ ಹೆರಿಗೆ,  ಜಂಬೂ ಸವಾರಿ ರದ್ದು!
1 / 1

1. ಶಿವಮೊಗ್ಗ: ಉತ್ಸವಕ್ಕೆ ಬಂದ ಆನೆಗೆ ಹೆರಿಗೆ, ಜಂಬೂ ಸವಾರಿ ರದ್ದು!

ಮೈಸೂರು ದಸರ ನಂತರ ಆನೆಗಳ ಮೂಲಕ ನಗರದಲ್ಲಿ ಜಂಬೂಸವಾರಿ ಮಾಡುವಂತಹ ದೃಶ್ಯ ಕಂಡು ಬರುವುದು ಶಿವಮೊಗ್ಗದಲ್ಲಿ ಮಾತ್ರ. ಉತ್ಸವದಲ್ಲಿ ಭಾಗಿಯಾಗಲು ಬಂದಂತಹ ನೇತ್ರಾವತಿ ಆನೆ ಕಳೆದ ರಾತ್ರಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ;

 ಕೊನೇ ಕ್ಷಣದಲ್ಲಿ ಜಂಬೂ ಸವಾರಿ ರದ್ದು.

ಉತ್ಸವದಲ್ಲಿ ಭಾಗಿಯಾಗಲು ಸಕ್ರೆಬೈಲ್‌ ಕ್ಯಾಂಪ್‌ ನಿಂದ ತರಬೇತಿ ನೀಡಿ ಕರೆಸಿದ್ದ ನೇತ್ರಾವತಿ ಆನೆಗೆ ಕಳೆದ ರಾತ್ರಿ ಹೆರಿಗೆ ಆದ ಕಾರಣ ಜಂಬೂ ಸವಾರಿ ರದ್ದಾಗಿದೆ. ಗರ್ಭಿಣಿ ಆನೆಯನ್ನು ತಾಲೀಮು ನೀಡಿ ತೊಂದರೆ ಕೊಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ದಶಕಗಳ ಹಿಂದಿನಿಂದಲೂ ಅದ್ದೂರಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿರುವ ಶಿವಮೊಗ್ಗ ನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕೆಲ ವರ್ಷಗಳಿಂದ ದಸರಾ ಉತ್ಸವಕ್ಕೆ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನ ಕರೆಯಿಸಿ ಮೆರವಣಿಗೆ ಮಾಡಿಸುತ್ತಿದೆ. ಇಲ್ಲಿಯೂ ಉತ್ಸವ ಮೂರ್ತಿಯನ್ನ ಮರದ ಅಂಬಾರಿಯಲ್ಲಿ ಹೊತ್ತು ಆನೆಗಳು ಇಂದು ಸಾಗಬೇಕಿತ್ತು. ಆದರೆ ಅರಣ್ಯ ಇಲಾಖೆಯ ಹೊಣೆಗೇಡಿತನದಿಂದ ಉತ್ಸವದಲ್ಲಿ ಭಾಗಿಯಾಗಲು ಬಂದಂತಹ ನೇತ್ರಾವತಿ ಆನೆ ಕಳೆದ ರಾತ್ರಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ. ಜಂಬೂ ಸವಾರಿಯೂ ರದ್ದಾಗಿದೆ.