ಸೋಂಕಲ್ ಜಂಕ್ಷನ್ ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ,

Uppala Sonkal Road Prepered Hump,

ಸೋಂಕಲ್ ಜಂಕ್ಷನ್ ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ,
1 / 1

1. ಸೋಂಕಲ್ ಜಂಕ್ಷನ್ ನಲ್ಲಿ ಹೆಚ್ಚುತ್ತಿರುವ ಅಪಘಾತಗಳು: ಹಂಪ್ ನಿರ್ಮಿಸಲು ಊರವರ ಒತ್ತಾಯ,

ಉಪ್ಪಳ: ಕೈಕಂಬ -ಬಾಯಾರು ರಸ್ತೆಯ ಸೋಂಕಲ್ ಜಂಕ್ಷನ್ ನಲ್ಲಿ ವಾಹನಗಳ ಅಪಘಾತ ವ್ಯಾಪಕಗೊಳ್ಳುತ್ತಿರುವುದು ಊರವರನ್ನು ಆತಂಕಕ್ಕಿಡಾಗಿಸಿದೆ. ಜ.7 ರಂದು ನಡೆದ ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದು ಕುಳೂರು ನಿವಾಸಿ ಮೃತಪಟ್ಟಿದ್ದಲ್ಲದೆ, ಈ ಹಿಂದೆ ರಸ್ತೆ ದಾಟುತಿದ್ದ ವೇಳೆ ಕಾರು ಡಿಕ್ಕಿಯಾಗಿ ಪುಳಿಕುತ್ತಿ ನಿವಾಸಿ ವೆಂಕಟ್ರಮಣ ಆಚಾರ್ಯ ಮೃತಪಟ್ಟಿದ್ದಾರೆ ಹಾಗೇ ಸ್ಕೂಟರ್ ಮತ್ತು ಟೆಂಪೋ ಡಿಕ್ಕಿಯಾಗಿ ಯುವಕನೋರ್ವ ಮೃತ ಪಟ್ಟ ಘಟನೆ ಕೂಡ ನಡೆದಿದೆ.ಅಲ್ಲದೆ ಸಣ್ಣಪುಟ್ಟ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಸ್ತೆಗೆ ಸಂಗಮಿಸುವ ಪರಿಸರದಲ್ಲಿ ಹಂಪ್ ಸ್ಥಾಪಿಸಿ ವಾಹನಗಳ ವೇಗವನ್ನು ನಿಯಂತ್ರಿಸಬೇಕೆಂದು ಊರವರು ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ ಪಿ ವಲ್ಸರಾಜ್ ರವರ ನೇತೃತ್ವದಲ್ಲಿ, ಮಂಜೇಶ್ವರ ಶಾಸಕ ಎ ಕೆ ಎಮ್ ಅಶ್ರಫ್ ರವರಿಗೆ ಮನವಿಯನ್ನು ನೀಡಿದ್ದು, ಶೀಘ್ರದಲ್ಲಿ ಕ್ರಮಕೈಗೊಳ್ಳುದಾಗಿ ಶಾಸಕರು ಭರವಸೆ ನೀಡಿರುತ್ತಾರೆ.