ನೃತ್ಯಕ್ಕೆ ಲಿಂಗ ಬೇಧವಿಲ್ಲ, ಹುಡುಗನೋರ್ವನ ಬಿಂದಾಸ್ ಬೆಲ್ಲಿ ಡಾನ್ಸ್ಗೆ ಮನಸೋತ ನೆಟ್ಟಿಗರು:
Vairel Video,Social Media
1. ನೃತ್ಯಕ್ಕೆ ಲಿಂಗ ಬೇಧವಿಲ್ಲ, ಹುಡುಗನೋರ್ವನ ಬಿಂದಾಸ್ ಬೆಲ್ಲಿ ಡಾನ್ಸ್ಗೆ ಮನಸೋತ ನೆಟ್ಟಿಗರು:
ಇಲ್ಲೊಬ್ಬ ಹೆಣ್ಣು ಮಕ್ಕಳೇ ಹೆಚ್ಚಾಗಿ ಮಾಡುವ ಬೆಲ್ಲಿ ಡಾನ್ಸ್ನ್ನು ಹೆಣ್ಣು ಮಕ್ಕಳೂ ನಾಚುವಂತೆ ಮಾಡಿದ್ದು, ಆತನ ಡಾನ್ಸ್ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ವೆರೈಟಿ ಕಾಮೆಂಟ್ ಮಾಡಿದ್ದು, ಬಾಲಿವುಡ್ ನಟಿ ಡಾನ್ಸರ್ ನೂರ್ ಫತೇಹಿಗಿಂತಲೂ ನೀನೆ ಚೆಂದ ಡಾನ್ಸ್ ಮಾಡಿದ್ದೀಯಾ ಎಂದು ಕಾಮೆಂಟ್ ಮಾಡಿದ್ದಾರೆ. ಓರ್ವ ಯುವಕ ಯಾವ ಹೆಣ್ಣು ಮಕ್ಕಳಿಗೂ ಕಡಿಮೆ ಇಲ್ಲದಂತೆ ಸೊಂಟ ಬಳುಕಿಸಿದ್ದಾನೆ. ಪ್ರತಿಯೊಂದು ಚಲನೆಯನ್ನು ಕೂಡ ಅಷ್ಟೇ ಸೊಬಗಿನಿಂದ ಯುವಕ ಮಾಡಿದ್ದು, ಜನ ಕಣ್ಣ್ರೆಪ್ಪೆ ಬಡಿಯದೇ ಈ ಡಾನ್ಸ್ನ್ನು ನೋಡಿದ್ದಾರೆ. ಪರಿಣಾಮ ಈ ವೀಡಿಯೋ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.