ಮೂರೇ ಮೂರು ಗಂಟೆಯಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ನುಗ್ಗುತ್ತಿರೋ ಕಾಂತಾರ ಫಸ್ಟ್ ಲುಕ್ ಟೀಸರ್!

Kaanthara, Firstlook Teaser,

ಮೂರೇ ಮೂರು ಗಂಟೆಯಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ನುಗ್ಗುತ್ತಿರೋ ಕಾಂತಾರ ಫಸ್ಟ್ ಲುಕ್ ಟೀಸರ್!
1 / 1

1. ಮೂರೇ ಮೂರು ಗಂಟೆಯಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ನುಗ್ಗುತ್ತಿರೋ ಕಾಂತಾರ ಫಸ್ಟ್ ಲುಕ್ ಟೀಸರ್!

ಕಾಂತಾರ ಚಾಪ್ಟರ್ ಒನ್ ಚಿತ್ರದ ಫಸ್ಟ್ ಲುಕ್ ಟೀಸರ್ ವೈರಲ್ ಆಗಿದೆ. ಯುಟ್ಯೂಬ್‌ನಲ್ಲಿ ವೀಕ್ಷಕರ ಸಂಖ್ಯೆ ಏರುತ್ತಿದೆ. ಮೂರೇ ಮೂರು ಗಂಟೆಯಲ್ಲಿ 2 ಮಿಲಿಯ್ ವೀವ್ಸ್ ಬಂದಿದೆ. ಅಲ್ಲಿಗೆ ಈ ಚಿತ್ರದ ಕ್ರೇಜ್ ಎಷ್ಟಿದೆ ಅನ್ನೋದು ತಿಳಿಯುತ್ತದೆ. ವಿಶೇಷವಾಗಿ ಈ ಸಿನಿಮಾದ ಫಸ್ಟ್ ಲುಕ್‌ ಬಗ್ಗೆ ಸಾಕಷ್ಟು ಕುತೂಹಲ ಇತ್ತು.

ಜನ ಈ ಚಿತ್ರದಲ್ಲಿ ರಿಷಬ್ ಶೆಟ್ರ ಲುಕ್ ಹೇಗೆ ಕಾಣಿಸುತ್ತದೆ ಅನ್ನೋದನ್ನ ಕಾತರದಿಂದಲೇ ನೋಡ್ತಾ ಇದ್ದರು. ಆದರೆ ಇದೀಗ ಚಿತ್ರದ ಮೊದಲ ಲುಕ್ ಎಲ್ಲರಿಗೂ ಒಂದು ಉತ್ತರ ಕೊಟ್ಟಿದೆ. ಜಟಧಾರಿ ರಿಷಬ್ ಶೆಟ್ರು ಬಹು ರೂಪಯಾಗಿಯೇ ಕಾಣಿಸುತ್ತಿದ್ದಾರೆ. ಪರಶುರಾಮನಂತೆ, ಅಘೋರಿಯಂತೆ, ಶಿವನ ಉಗ್ರರೂಪದಂತೆ ಕಾಣಿಸುತ್ತಿದ್ದಾರೆ.

ಅಂತಹ ಈ ಒಂದು ಲುಕ್‌ನ ಟೀಸರ್‌ಗೆ ಮೂರೇ ಮೂರು ಗಂಟೆಯಲ್ಲಿ ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಅದರ ಲೆಕ್ಕ 3.23 ಕ್ಕೆ 2 ಲಕ್ಷ 82 ಸಾವಿರ ಇತ್ತು ನೋಡಿ. ಅಷ್ಟೊಂದು ಜನ ಈ ಒಂದು ಟೀಸರ್‌ ಅನ್ನ ಇಷ್ಟಪಟ್ಟಿದ್ದಾರೆ. ಇವರ ಈ ಒಂದು ಲೈಕ್ಸ್ ಕಂಡು ಸಿನಿಮಾ ತಂಡವೂ ಫುಲ್ ಖುಷ್ ಆಗಿದೆ.