ಹಾಸನಾಂಬೆ ದರ್ಶನ.! 2023,

Hassanambe,Direct Entry,

ಹಾಸನಾಂಬೆ ದರ್ಶನ.! 2023,
1 / 1

1. ಹಾಸನಾಂಬೆ ದರ್ಶನ.! 2023,

ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ, ಬೇಡಿದ ವರವನ್ನು ಕರುಣಿಸುತ್ತಾ ಹಾಸನದಲ್ಲಿ ನೆಲೆನಿಂತಿರುವ ಹಾಸನಾಂಬೆ ದೇವಾಲಯದ ದರ್ಶನವನ್ನು ಈ ಬಾರಿ ಯಾವ ದಿನಗಳಲ್ಲಿ ಮಾಡಬಹುದು. 

ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾದ ಮತ್ತು ಪ್ರತಿವರ್ಷ ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಈ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತದೆ. ಭಕ್ತರು ವರ್ಷದಲ್ಲಿ ದೀಪಾವಳಿ ಸಮಯದಲ್ಲಿ ಮಾತ್ರ ಈ ದೇವಿಯ ದರ್ಶನವನ್ನು ಮಾಡಬಹುದು. ಪ್ರತಿವರ್ಷದಂತೆ ಈ ವರ್ಷದ ದೀಪಾವಳಿ ಸಮಯದಲ್ಲೂ ಹಾಸನಾಂಬೆ ದೇವಸ್ಥಾನದ ದರ್ಶನವನ್ನು ಭಕ್ತರು ಪಡೆದುಕೊಳ್ಳಬಹುದು. ಈ ಬಾರಿ ನವೆಂಬರ್‌ 2 ರಿಂದ ಅಂದರೆ ಇಂದಿನಿಂದ ನವೆಂಬರ್‌ 15 ರವರೆಗೆ ಹಾಸನಾಂಬೆ ದೇವಾಲಯಕ್ಕೆ ಭಕ್ತರು ಭೇಟಿ ನೀಡಬಹುದಾಗಿದೆ. ದೇವಾಲಯವು ಈ 12 ದಿನಗಳಲ್ಲಿ ಮುಂಜಾನೆ 6 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 10:30 ರವರೆಗೆ ಭಕ್ತರಿಗೆ ದರ್ಶನಕ್ಕೆ ತೆರೆದಿರುತ್ತದೆ. ಈ ಬಾರಿ ದೇವಾಲಯಕ್ಕೆ 10 ಲಕ್ಷ ಭಕ್ತಾದಿಗಳು ಆಗಮಿಸಬಹುದೆನ್ನುವ ನಿರೀಕ್ಷೆಯಿದೆ.