ಮುಳ್ಳಯ್ಯನಗಿರಿ ದಾರಿಯಲ್ಲಿ ಗಮನ ಸೆಳೆಯುತ್ತಿರೋ 'ಐ ಲವ್‌ ಚಿಕ್ಕಮಗಳೂರು'!

Chikkamagalore,Mullayana Giri,

ಮುಳ್ಳಯ್ಯನಗಿರಿ ದಾರಿಯಲ್ಲಿ ಗಮನ ಸೆಳೆಯುತ್ತಿರೋ 'ಐ ಲವ್‌ ಚಿಕ್ಕಮಗಳೂರು'!
1 / 1

1. ಮುಳ್ಳಯ್ಯನಗಿರಿ ದಾರಿಯಲ್ಲಿ ಗಮನ ಸೆಳೆಯುತ್ತಿರೋ 'ಐ ಲವ್‌ ಚಿಕ್ಕಮಗಳೂರು'!

ಚಿಕ್ಕಮಗಳೂರು: ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಐ ಲವ್‌ ಬೋರ್ಡ್‌ಗಳು ಹೊಸ ಟ್ರೆಂಡ್‌ ಆಗಿ ಬದಲಾಗಿದೆ. ವಿಶೇಷವಾಗಿ ಹೋಟೆಲ್‌, ರೆಸ್ಟೋರೆಂಟ್‌ ಆವರಣದಲ್ಲಿ ಇಂತಹ ಬೋರ್ಡ್‌ಗಳು ಕಾಣಸಿಗುತ್ತವೆ. ಆ ಸಾಲಿಗೆ ಇದೀಗ ಚಿಕ್ಕಮಗಳೂರು ಕೂಡಾ ಸೇರ್ಪಡೆಗೊಂಡಿದೆ. ಇಲ್ಲಿನ ಖಾಸಗಿ ಹೋಟೆಲ್‌ ಮುಂದೆ ಇರೋ ‘ಐ ಲವ್‌ ಸಿಕೆಎಂ’ ಭಾರೀ ಗಮನ ಸೆಳೆಯುತ್ತಿದೆ. ಪ್ರತಿದಿನ ಹತ್ತಾರು ಮಂದಿ ಫೋಟೋ ಕ್ಲಿಕ್ಕಿಸಿ ಮಲೆನಾಡಿನ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತಿದ್ದಾರೆ. ಚಿಕ್ಕಮಗಳೂರಿನ ದಿ ಗ್ಲಾಸ್ ಇನ್ ರೆಸ್ಟೋರೆಂಟ್ ನಲ್ಲಿರುವ ‘ಐ ಲವ್ ಯು ಸಿಕೆಎಂ’ ನೋಡಲು ಅದ್ಭುತವಾಗಿದೆ. ಕೆಂಪು ಬಣ್ಣದಲ್ಲಿರೋ ಈ ಬೋರ್ಡ್‌ ಅಂತೂ ರಾತ್ರಿ ಸಮಯಕ್ಕೆ ಲೈಟಿಂಗ್ಸ್‌ನಿಂದ ಇನ್ನಷ್ಟು ಕಂಗೊಳಿಸುತ್ತದೆ. ಮಲೆನಾಡಿಗೆ ಪ್ರವಾಸಕ್ಕೆಂದು ಬರುವವರಿಗೆ ‘ಐ ಲವ್‌ ಸಿಕೆಎಂ’ ಅಥವಾ ‌’ಐ ಲವ್‌ ಚಿಕ್ಕಮಗಳೂರು’ ಅನ್ನೋ ಈ ಕೆಂಪಗಿನ ಬೋರ್ಡ್‌ ಕೈ ಬೀಸಿ ಕರೆಯುತ್ತೆ. ಪ್ರತಿದಿನ ಏನಿಲ್ಲ ಅಂದ್ರೂ 50 ಕ್ಕಿಂತಲೂ ಅಧಿಕ ಜನ ಆಗಮಿಸಿ ಇದರ ಮುಂದೇನೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.